ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
ಮಾಹಿತಿ ಹಕ್ಕು ಅಧಿನಿಯಮ 2005 ರಡಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ವಿವರಗಳ ಪ್ರಕಟಣೆ:
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(i) - ನಿಗಮದ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳು:
ರಚನೆ:
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತವು 1956ರ ಕಂಪನಿ ಕಾಯ್ದೆ ಅನ್ವಯ 29ನೇ ಏಪ್ರಿಲ್ 1960 ರಂದು ಸ್ಥಾಪನೆಗೊಂಡಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ ಒಂದು ಸಾರ್ವಜನಿಕ ಉದ್ದಿಮೆಯಾಗಿರುತ್ತದೆ. ಈ ನಿಗಮವು ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧೀನಕ್ಕೆ ಒಳಪಟ್ಟಿರುತ್ತದೆ. ಕೇಂದ್ರ ಕಛೇರಿಯಲ್ಲಿ ವಿವಿಧ ವಿಭಾಗಗಳು ಮತ್ತು ರಾಜ್ಯಾದಾದ್ಯಂತ ಹೊಂದಿರುವ ಕಛೇರಿಗಳು ಮತ್ತು ಪ್ರತಿ ವಿಭಾಗ, ಕಛೇರಿಗಳಿಗೆ ಮಂಜೂರಾಗಿರುವ ಹುದ್ದೆಗಳ ವಿವರ ಇತ್ಯಾದಿ ಮಾಹಿತಿ ಅಧಿಸೂಚನೆ ಸಂಖ್ಯೆ. ಆಡಳಿತ/ವಿಭಾಗೀಯ-ವಿಲೀನ/2015/2120 ದಿನಾಂಕ 24.09.2016 (ಅನುಬಂಧ 1(A),1(B),1(C) ಮತ್ತು 1(D) ) ರಲ್ಲಿ ತೋರಿಸಿರುವಂತೆ ಇರುತ್ತದೆ.
ಕಾರ್ಯಗಳು ಮತ್ತು ಕರ್ತವ್ಯಗಳು:
ನಿಗಮದ ಮೆಮೊರಾಂಡಮ್ ಆಫ್ ಅಸ್ಸೊಸಿಯೆಷನ್ ಮತ್ತು ಆರ್ಟಿಕಲ್ಸ್ ಆಫ್ ಅಸ್ಸೊಸಿಯೆಷನ್ ಪ್ರಕಾರ ಇರುತ್ತದೆ. ಸದರಿ ನಿಯಮಾವಳಿಗಳಲ್ಲಿ ಪ್ರಸ್ತಾಪಿಸಿರುವ ಹಲವಾರು ಚಟುವಟಿಕೆಗಳಲ್ಲಿ, ಕೈಗಾರಿಕಾ ವಸಾಹತುಗಳ ಅಭಿವೃದ್ಧಿಗಾಗಿ ಕೆ.ಐ.ಎ.ಡಿ.ಬಿ. ಮೂಲಕ ಭೂಸ್ವಾಧೀನಪಡಿಸಿಕೊಳ್ಳುವುದು, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ ಮತ್ತು ಅಲ್ಲಿ ಕೈಗಾರಿಕಾ ನಿವೇಶನಗಳ ನಿರ್ಮಾಣ, ಅರ್ಹ ಕೈಗಾರಿಕೋದ್ಯಮಿಗಳಿಗೆ ನಿವೇಶನಗಳ ಹಂಚಿಕೆ, ಸಣ್ಣ ಕೈಗಾರಿಕಾ ಟಕಗಳಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿ ಖರೀದಿ ಮತ್ತು ಸರಬರಾಜು ಮಾಡುವುದು.
ವ್ಯವಸ್ಥಾಪಕ ನಿರ್ದೇಶಕರು:
ಇವರು ಭಾರತೀಯ ಆಡಳಿತ ಸೇವೆ (ಕರ್ನಾಟಕ ವೃಂದ) ದರ್ಜೆಯ ಅಧಿಕಾರಿಯಾಗಿದ್ದು, ಸರ್ಕಾರದಿಂದ ನಿಯೋಜಿಸಲ್ಪಟ್ಟಿರುತ್ತಾರೆ. ಇವರು ನಿಗಮದ ಚಟುವಟಿಕೆಗಳಾದ ಕೈಗಾರಿಕಾ ವಸಾಹತು ಸ್ಥಾಪನೆ ಮತ್ತು ಅಭಿವೃದ್ಧಿ, ಮಳಿಗೆ ಮತ್ತು ನಿವೇಶನಗಳ ನಿರ್ಮಾಣ ಹಾಗೂ ಹಂಚಿಕೆ, ಕಚ್ಚಾ ಸಾಮಗ್ರಿ ಖರೀದಿ ಮತ್ತು ಸರಬರಾಜು ಇತ್ಯಾದಿ ಚಟುವಟಿಗಳನ್ನು ಒಟ್ಟಾರೆ ನಿಯಂತ್ರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ನಿಗಮದ ಆಡಳಿತಾತ್ಮಕ ಇಲಾಖೆಯಾದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಮುಖ್ಯಸ್ಥರಾದ ಸರ್ಕಾರದ ಕಾರ್ಯದರ್ಶಿಯವರು ಕಾಲಕಾಲಕ್ಕೆ ನೀಡಬಹುದಾದಂತಹ ಸಾಮಾನ್ಯ ಅಥವಾ ವಿಶೇಷ ನಿರ್ದೇಶನಗಳಿಗೊಳಪಟ್ಟು ಸಿಬ್ಬಂದಿ ವರ್ಗದ ನೇಮಕಾತಿ, ನಿಯುಕ್ತಿ, ರಜೆ ನಿವೃತ್ತಿ, ಶಿಸ್ತು ಕ್ರಮ ಇವುಗಳಿಗೆ ಸಂಬಂಧಪಡುವ ವಿಷಯಗಳ ಕಾರ್ಯಗಳನ್ನು ನಿರ್ವಹಿಸುತ್ತಾರೆ. ವ್ಯವಸ್ಥಾಪಕ ನಿರ್ದೇಶಕರು ನಿಗಮದ ದಕ್ಷ ಕಾರ್ಯಾಚರಣೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಆಡಳಿತ ಸುಧಾರಣೆಗಳ ಬಗ್ಗೆ ಸತತ ಪ್ರಯತ್ನ ಮಾಡುವ ಒಟ್ಟಾರೆ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.ಇವರ ಅಧೀನದಲ್ಲಿ ಕೆಳಕಂಡಂತೆ ಹುದ್ದೆಗಳಲ್ಲಿರುವ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(ii) - ನಿಗಮದ ಅಧಿಕಾರಿಗಳ/ನೌಕರರ ಅಧಿಕಾರ ಮತ್ತು ಕರ್ತವ್ಯಗಳು:
ಆಡಳಿತ:
(1) ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಭೂಸ್ವಾಧೀನ) / (ಸಾರ್ವಜನಿಕ ಸಂಪಕ/ಸಮನ್ವಯ)
ಸಿಬ್ಬಂದಿ ಮತ್ತು ಆಡಳಿತ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ಇವರು ಹೊಂದಿರುತ್ತಾರೆ ಮತ್ತು ಇವರ ಅಧೀನದಲ್ಲಿ ಬರುವ ಉಪ ಪ್ರಧಾನ ವ್ಯವಸ್ಥಾಪಕರುಗಳ ಮೇಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ನಿಗಮದಲ್ಲಿ ಇವರಿಗಿಂತ ಕೆಳಹಂತದ ಅಧಿಕಾರಿಗಳ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ, ಅಂದರೆ ರಜೆ ಮಂಜೂರಾತಿ, ವೇತನ ಬಡ್ತಿಗಳ ಮಂಜೂರಾತಿ, ಕೆಲಸಗಳ ಬಗ್ಗೆ ಆಡಳಿತಾತ್ಮಕ ಸೂಚನೆ/ನಿರ್ದೇಶನ ನೀಡುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಕಛೇರಿ ಆದೇಶ ಸಂಖ್ಯೆ. EST/PER/CREA/DEL/GM/87 ದಿನಾಂಕ 03.08.1987 (ಅನುಬಂಧ-2) ರಲ್ಲಿ ನೀಡಿರುವ ಅಧಿಕಾರವನ್ನು ಹೊಂದಿರುತ್ತಾರೆ.
ಸಾರ್ವಜನಿಕ ಸಂಪರ್ಕ, ಸಮನ್ವಯ ಮತ್ತು ಭೂಸ್ವಾಧೀನ ವಿಭಾಗಗಳು ಇವರ ಅಧೀನದಲ್ಲಿರುತ್ತವೆ. ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ನಿಗಮದ ವಾಹನಗಳ ನಿರ್ವಹಣೆ, ಲೇಖನ ಸಾಮಗ್ರಿ ಖರೀದಿ, ವಿತರಣೆ, ಪತ್ರಿಕೆಗಳಲ್ಲಿ ನಿಗಮದ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ಗಳ ಪ್ರಕಟಣೆ, ಕೈಗಾರಿಕಾ ಮಳಿಗೆ/ನಿವೇಶನಗಳ ಹಂಚಿಕೆ ಪ್ರಕಟಣೆ, ಸೆಕ್ಯೂರಿಟಿ ಏಜೆನ್ಸಿ ಟೆಂಡರ್ ಪ್ರಕಟಣೆ, ಸೆಕ್ಯೂರಿಟಿ ಸಿಬ್ಬಂದಿ ಬಿಲ್ ಪಾವತಿ, ಇತ್ಯಾದಿ ಕೆಲಸಗಳ ಮೇಲ್ವಿಚಾರಣೆ ಅಧಿಕಾರಿವನ್ನು ಹೊಂದಿರುತ್ತಾರೆ.
ಸಮನ್ವಯ ವಿಭಾಗದಲ್ಲಿ ನಿಗಮವು ನಿರ್ವಹಿಸುವ ಕೈಗಾರಿಕಾ ವಸಾಹತು ಕೆಲಸಗಳು, ವಾಣಿಜ್ಯ ವಹಿವಾಟು ಕೆಲಸಗಳು, ಹಣಕಾಸು ವಹಿವಾಟು ಕೆಲಸಗಳು, ನಿರ್ಮಾಣ ಮತ್ತು ಉಸ್ತುವಾರಿ ಕೆಲಸಗಳು, ಆಡಳಿತ ವ್ಯವಸ್ಥೆ ಕೆಲಸಗಳು, ಇತ್ಯಾದಿ ಕೆಲಸಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ವಿಧಾನ ಸಭೆ/ವಿಧಾನ ಪರಿಷತ್ ಪ್ರಶ್ನಾವಳಿಗಳಿಗೆ ಸಂಬಂಧಪಟ್ಟವರಿಂದ ಉತ್ತರವನ್ನು ಸಂಗ್ರಹಿಸಿ ರವಾನಿಸುವ ಕೆಲಸಗಳ ನಿರ್ವಹಣೆ.ನಿಗಮದ ಕೈಗಾರಿಕಾ ವಸಾಹತುಗಳ ಸ್ಥಾಪನೆಗಾಗಿ ಕೆ.ಐ.ಎ.ಡಿ.ಬಿ. ಮೂಲಕ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
(2) ಪ್ರಧಾನ ವ್ಯವಸ್ಥಾಪಕರು (ಕೈವ)
ಇವರ ಅಧೀನದಲ್ಲಿ ಕೈಗಾರಿಕಾ ವಸಾಹತು ವಲಯ, ವಿಭಾಗೀಯ ಮತ್ತು ಶಾಖಾ ಕಛೇರಿಗಳ ಕೈಗಾರಿಕಾ ವಸಾಹತುಗಳಲ್ಲಿ ಮಳಿಗೆ/ನಿವೇಶನಗಳ ಹಂಚಿಕೆ ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಹಾಗೂ ಕರಾರು ಅವಧಿ ಮುಗಿದ ನಂತರ ಕ್ರಯಪತ್ರ ವಿತರಣೆ ಇತ್ಯಾದಿ ಕೆಲಸಗಳಿಗೆ ಸಂಬಂಧಿಸಿದಂತೆ ಉಪ ಪ್ರಧಾನ ವ್ಯವಸ್ಥಾಪಕರುಗಳ ಮೇಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಕಛೇರಿ ಆದೇಶ ಸಂಖ್ಯೆ. EST/PER/CREA/DEL/GM/87 ದಿನಾಂಕ 03.08.1987 (ಅನುಬಂಧ-2)ರಲ್ಲಿ ನೀಡಿರುವ ಅಧಿಕಾರವನ್ನು ಹೊಂದಿರುತ್ತಾರೆ.
(3) ಪ್ರಧಾನ ವ್ಯವಸ್ಥಾಪಕರು (ವಾಣಿಜ್ಯ)
ಇವರ ಅಧೀನದಲ್ಲಿ ವಾಣಿಜ್ಯ ವಿಭಾಗ ಮತ್ತು ಕಚ್ಚಾ ಸಾಮಗ್ರಿ ಡಿಪೋಗಳು ಕಾರ್ಯನಿರ್ವಹಿಸುತ್ತವೆ. ಸಣ್ಣ ಕೈಗಾರಿಕಾ ಟಕಗಳಿಗೆ ಕಚ್ಚಾ ಸಾಮಗ್ರಿ ಖರೀದಿಸಿ ಸರಬರಾಜು ಮಾಡುವ ಎಲ್ಲ ಪ್ರಕ್ರಿಯೆಗಳ ನಿಯಂತ್ರಿಸುವ ಅಧಿಕಾರವನ್ನು ಹಾಗೂ ಕಛೇರಿ ಆದೇಶ ಸಂಖ್ಯೆ. EST/PER/CREA/DEL/GM/87 ದಿನಾಂಕ 03.08.1987 (ಅನುಬಂಧ-2)ರಲ್ಲಿ ನೀಡಿರುವ ಅಧಿಕಾರವನ್ನು ಹೊಂದಿರುತ್ತಾರೆ.
(4) ಉಪ ಪ್ರಧಾನ ವ್ಯವಸ್ಥಾಪಕರು:
ಉಪ ಪ್ರಧಾನ ವ್ಯವಸ್ಥಾಪಕರು-ವಲಯ-1 ಮತ್ತು 2:
ಇವರು ಪ್ರಧಾನ ವ್ಯವಸ್ಥಾಪಕರುಗಳ ನೇರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೈಗಾರಿಕಾ ವಸಾಹತು ವಿಭಾಗಕ್ಕೆ ಸಂಬಂಧಿಸಿದಂತೆ ವಲಯ ಕಛೇರಿಗಳ ಸಂಪೂರ್ಣ ನಿಯಂತ್ರಿಸುವ ಅಧಿಕಾರವನ್ನು ಇವರು ಹೊಂದಿರುತ್ತಾರೆ. ನಿಗಮವು ಅಭಿವೃದ್ಧಿಪಡಿಸಿದ ಕೈಗಾರಿಕಾ ವಸಾಹತುಗಳಲ್ಲಿ ಮಳಿಗೆ/ ನಿವೇಶನಗಳ ಹಂಚಿಕೆ ಪ್ರಕ್ರಿಯೆ ನಡೆಸುವುದು, ಅವರುಗಳ ಅಧೀನದಲ್ಲಿ ಬರುವ ಕೈಗಾರಿಕಾ ವಸಾಹತುಗಳ ನಿರ್ವಹಣೆ ಜವಾಬ್ದಾರಿ, ಅವರ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಕೈಗಾರಿಕಾ ವಸಾಹತುಗಳ ಸ್ಥಾಪನೆಗೆ ಭೂಸ್ವಾಧೀನಕ್ಕೆ ಜಾಗದ ಪರಿಶೀಲನೆ, ಜಿಲ್ಲಾ ಹಂಚಿಕೆ ಸಮಿತಿಗಳಲ್ಲಿ ಭಾಗವಹಿಸುವುದು, ಕೈಗಾರಿಕೋದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು, ಮಳಿಗೆ/ನಿವೇಶನಗಳ ಬಾಕಿ ವಸೂಲಾತಿಯ ಮೇಲ್ವಿಚಾರಣೆ, ವಲಯ ಕಛೇರಿ ಮತ್ತು ಅವರ ವ್ಯಾಪ್ತಿಯಲ್ಲಿ ಬರುವ ಕಚ್ಚಾ ಸಾಮಗ್ರಿ ಡಿಪೋಗಳ ಮೇಲ್ವಿಚಾರಣೆ ಇತ್ಯಾದಿ ಕೆಲಸಗಳು.
ವಲಯ-1 ರ ವ್ಯಾಪ್ತಿಯ ಕಛೇರಿಗಳು: ರಾಜಾಜಿನಗರ, ಬೆಂಗಳೂರು, ಪೀಣ್ಯ, ತುಮಕೂರು, ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಗಳೂರು.
ವಲಯ-2 ರ ವ್ಯಾಪ್ತಿಯ ಕಛೇರಿಗಳು: ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ, ಬಳ್ಳಾರಿ.
ಕೈಗಾರಿಕಾ ವಸಾಹತು ವಿಭಾಗಗಳ ಕೆಲಸಗಳಿಗೆ ಸಂಬಂಧಿಸಿದಂತೆ ಕಛೇರಿ ಆದೇಶ ಸಂಖ್ಯೆ. EST/PER/DEL/GM/99 ದಿನಾಂಕ 19.03.1999 (ಅನುಬಂಧ-3)ರಲ್ಲಿ ನೀಡಿರುವಂತೆ ಅಧಿಕಾರವನ್ನು ಹೊಂದಿರುತ್ತಾರೆ.
ಉಪ ಪ್ರಧಾನ ವ್ಯವಸ್ಥಾಪಕರು(ಹಣಕಾಸು):
ಹಣಕಾಸು ವಿಭಾಗಕ್ಕೆ ಸಂಬಂಧಿಸಿದಂತೆ ಆಕ ನೀತಿಗಳನ್ನು ರೂಪಿಸುವುದು, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆಕ ವಹಿವಾಟಿನ ಯೋಜನಾ ವರದಿ ತಯಾರಿಕೆ, ವಾಣಿಜ್ಯ ಲೆಕ್ಕ, ಕಾಮಗಾರಿ ಲೆಕ್ಕ, ಆಕ ಸೇವೆಗಳು ಇತ್ಯಾದಿ ಕೆಲಸಗಳ ನಿರ್ವಹಣೆ, ಆಕ ಶಿಸ್ತಿನ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ಸಲಹೆ ನೀಡುವುದು, ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ನಿಯಂತ್ರಣ ಮತ್ತು ನಿಗದಿಪಡಿಸಿದ ನಿಧಿಗೆ ಅನುಗುಣವಾಗಿ ಖರ್ಚು-ವೆಚ್ಚಗಳ ನಿರ್ವಹಣೆ, ನಿಗಮದ ವಾರ್ಷಿಕ ಆಯ-ವ್ಯಯ ಸಿದ್ದಪಡಿಸುವುದು, ಹಣಕಾಸು ವಾರ್ಷಿಕ ವರದಿ ತಯಾರಿಕೆಗೆ ಪೂರ್ವಭಾವಿ ಸಿದ್ದತೆ ನಡೆಸುವುದು.
ವಾಣಿಜ್ಯ ಲೆಕ್ಕ ವಿಭಾಗದ ಮುಖ್ಯ ಕಾರ್ಯ ಚಟುವಟಿಕೆಗಳು:
- ಕಚ್ಚಾ ಸಾಮಗ್ರಿಗಳ ಖರೀದಿ ಮತ್ತು ಮಾರಾಟ ವಹಿವಾಟು ನಿರ್ವಹಣೆ, ಟಕಗಳ ವಹಿವಾಟಿ ಖಾತೆಗಳ ಲೆಕ್ಕ ನಿರ್ವಹಣೆ, ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಲೆಕ್ಕಾಚಾರ ಮತ್ತು ಪಾವತಿ ಶಾಸನಬದ್ಧ ವಂತಿಗೆಗಳನ್ನು ನಿಗದಿತ ದಿನಾಂಕಗಳಲಿ ಪಾವತಿ.
- ವ್ಯಾಟ್ ಮತ್ತು ಸೇವಾ ತೆರಿಗೆ ಖಾತೆಗಳ ಲೆಕ್ಕ ಪರಿಶೀಲನೆ ಮತ್ತು ಕರ ನಿರ್ಧಾರಣೆ.
- ಹೆಚ್ಚುವರಿ ನಿಧಿಗಳನ್ನು ನಿಗದಿತ ಠೇವಣಿಗಳಲ್ಲಿ ಇರಿಸುವ ಮೂಲಕ ಸಮರ್ಥವಾಗಿ ನಿಧಿಯ ನಿರ್ವಹಣೆ.
- ನಿಗಮದ ಎಲ್ಲಾ ಉದ್ಯೋಗಿಗಳ ವೇತನ ತಯಾರಿ, ಶಾಸನಬದ್ಧ ಪಾವತಿಗಳ ವಿಮೆ, ಪಿ.ಏಫ್, ಐಟಿ, ಪಿಟಿ, ಎಲ್ಐಸಿ, ಬ್ಯಾಂಕ್ ಸಾಲ ಇತ್ಯಾದಿಗಳನ್ನು ನಿಗದಿತ ದಿನಾಂಕಗಳಲ್ಲಿ ಪಾವತಿ.
- ಸಂಬಂಧಿತ ಇಲಾಖೆಗಳಿಂದ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ವಾರ್ಷಿಕ ಆಯವ್ಯಯವನ್ನು ಸಿದ್ಧಪಡಿಸುವುದು.
- ಅಂದಾಜು ಖರ್ಚು ಮತ್ತು ಖಾತೆಗಳ ನಿರ್ವಹಣೆಯ ವಲಯವಾರು ಅನುಷ್ಠಾನ.
- ಬ್ಯಾಲೆನ್ಸ್ ಶೀಟ್ ಮತ್ತು ಕಂಪನಿಯ ಲಾಭ ಮತ್ತು ನಷ್ಟ ಹೇಳಿಕೆಗಳ ತಯಾರಿಕೆ.
- ಕಂಪನಿಯ ಆದಾಯ ತೆರಿಗೆ, ಸಂಪತ್ತು ತೆರಿಗೆ, ಜಿಎಸ್ಟಿ ನಿಯತಕಾಲಿಕವಾಗಿ ಪಾವತಿ.
- ಗುತ್ತಿಗೆದಾರರು, ವೃತ್ತಿಪರರು ಮತ್ತು ನೌಕರರಿಂದ ಮಾಸಿಕ ತೆರಿಗೆಗಳನ್ನು ಮತ್ತು ಆದಾಯ ತೆರಿಗೆಯನ್ನು ಪಾವತಿಸುವುದು.
- ಗುತ್ತಿಗೆದಾರರಿಗೆ ಮತ್ತು ವೃತ್ತಿಪರರಿಗೆ ತ್ರೈಮಾಸಿಕ ಫಾರಂ ಗ 16ಎ ವಿತರಣೆ.
- ನಿಗಮದ ನೌಕರರಿಗೆ ಫಾರಂ ಗ 16 ವಿತರಣೆ.
- ಭದ್ರತಾ ಸೇವೆಗಳ ಬಿಲ್, ವಾಹನ ರಿಪೇರಿ ಮತ್ತು ಇಂಧನ ವೆಚ್ಚಗಳು, ಸರಕು ಸಾಗಾಣಿಕೆದಾರರ ಬಿಲ್ಗಳು, ವೃತ್ತಿಪರ ಬಿಲ್ಗಳು ಮುಂತಾದ ಎಲ್ಲಾ ಇತರೆ ಪಾವತಿಗಳ ನಿರ್ವಹಣೆ.
ಉಪ ಪ್ರಧಾನ ವ್ಯವಸ್ಥಾಪಕರು(ವಾಣಿಜ್ಯ):
ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಸಣ್ಣ ಕೈಗಾರಿಕಾ ಟಕಗಳಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿ ಖರೀದಿ ಮತ್ತು ಪೂರೈಕೆ ಕೆಲಸಗಳ ನಿರ್ವಹಣೆ, ಕಚ್ಚಾ ಸಾಮಗ್ರಿ ವಹಿವಾಟಿಗೆ ಮಾರುಕಟ್ಟೆ ವಿಸ್ತರಣೆ ಕೆಲಸಗಳು, ಕಚ್ಚಾ ಸಾಮಗ್ರಿ ಪಡೆಯುವ ಕೈಗಾರಿಕೋದ್ಯಮಿಗಳ ಕುಂದು ಕೊರತೆಗಳ ನಿವಾರಣೆಗೆ ಕ್ರಮವಹಿಸುವುದು, ಇತ್ಯಾದಿ ಕೆಲಸಗಳು.
ವಾಣಿಜ್ಯ ವಿಭಾಗದ ಚಟುವಟಿಕೆಗಳ ವಿವರ:
ನಿಗಮದ Article of Association ಹಾಗೂ ಕರ್ನಾಟಕ ಕೈಗಾರಿಕಾ ನೀತಿ-2014-19ರ ಕ್ರಮ ಸಂಖ್ಯೆ: 5.6.1.10 ರಂತೆ ಸಣ್ಣ ಕೈಗಾರಿಕಾ ಟಕಗಳಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳಾದ ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ಕಚ್ಚಾ ಮೇಣ ಹಾಗೂ ಸಿಮೆಂಟ್ ಇತ್ಯಾದಿ ಸ್ಪರ್ಧಾತ್ಮಕ ದರಗಳಲ್ಲಿ ಮೂಲ ಉತ್ಪಾದಕರಿಂದ ಖರೀದಿಸಿ ರಾಜ್ಯದಾದ್ಯಂತ ಇರುವ MSME ಟಕಗಳಿಗೆ ಸರಬರಾಜು ಮಾಡಲಾಗುತ್ತಿದೆ.
ನಿಗಮದಿಂದ ಸರಬರಾಜು ಮಾಡಲಾಗುವ ಕಚ್ಚಾ ಸಾಮಗ್ರಿಗಳು ಶೇ.100ರಷ್ಟು ನಿರ್ದಿಷ್ಟ ತೂಕ, ನಿಖರವಾದ ದರ ಹಾಗೂ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಅಲ್ಲದೆ, ಸಣ್ಣ ಕೈಗಾರಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿನ ಮಾರಾಟಗಾರರ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸುವಲ್ಲಿ ನಿಗಮವು ಕಳೆದ (ಐದು) 5 ದಶಕಗಳಿಂದ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುತ್ತದೆ.
ಪ್ರಸ್ತುತ ನಿಗಮವು ಕೆಳಕಂಡ ಕಬ್ಬಿಣ ಮತ್ತು ಉಕ್ಕು ಕಚ್ಚಾ ಸಾಮಗ್ರಿಗಳನ್ನು ಮೆ: ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಲಿ., ಮತ್ತು ಮೆ:ರಾಷ್ಟ್ರೀಯ ಇಸ್ ಪಾತ್ ನಿಗಮ್ ಲಿ., ನಿಂದ ಖರೀದಿಸಿ ಸರಬರಾಜು ಮಾಡಲಾಗುತ್ತಿದೆ.
ಎಂ.ಎಸ್.ಆಂಗಲ್ಸ್ / ಛಾನಲ್ಸ್, ಜಾಯ್ಟ್ಸ್ / ಬೀಮ್ಸ್ , ಎಂ.ಎಸ್. ಪ್ಲೇಟ್ಸ್, ಹೆಚ್.ಆರ್./ ಸಿ.ಆರ್.ಶೀಟ್ಸ್ , ಜಿ.ಪಿ.ಶೀಟ್ಸ್,, ಜಿ.ಸಿ.ಶೀಟ್ಸ್, ಎಂ.ಎಸ್.ರೌಂಡ್ಸ್, ಮತ್ತು ಟಿ.ಎಂ.ಟಿ.ಇತ್ಯಾದಿ.
ಇದಲ್ಲದೆ ಮೆ: ಜಿಂದಾಲ್ ಸ್ಟೀಲ್ ವಕ್ರ್ಸ್ ಲಿ., ಸಂಸ್ಥೆಯ ಸಂಗಡ MOU ಮಾಡಿಕೊಳ್ಳುವ ಮೂಲಕ ಕೈಗಾರಿಕೆಗಳಿಗೆ ಬೇಕಾಗುವ ಸಾಮಗ್ರಿಗಳಾದ ಎಂ.ಎಸ್.ಪ್ಲೇಟ್ಸ್, ಹೆಚ್.ಆರ್.ಶೀಟ್ಸ್, ವೈರಾಡ್ ಕಾಯಿಲ್ ಹಾಗೂ ಟಿಎಂಟಿ ಗಳನ್ನು ಖರೀದಿಸಿ ಪೂರೈಸಲಾಗುತ್ತಿದೆ.
ಮೆ:ಎಸ್ಸಾರ್ ಸ್ಟೀಲ್ ಲಿ., ಸಂಗಡ ಡೀಲರ್ಶಿಪ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಎಂ.ಎಸ್.ಪ್ಲೇಟ್ಸ್, ಹೆಚ್.ಆರ್.ಶೀಟ್ಸ್ ಮತ್ತು ಸಿ.ಆರ್.ಶೀಟ್ಸ್ ಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತದೆ.
ಮೇಲಿನಂತೆ ಖರೀದಿ ಮಾಡಲಾಗುವ ಸಾಮಗ್ರಿಗಳನ್ನು ಬೆಂಗಳೂರಿನ ಚನ್ನಸಂದ್ರದಲ್ಲಿರುವ ಮುಖ್ಯ ಉಗ್ರಾಣ ಹಾಗೂ ಈ ಕೆಳಕಂಡ ಡಿಪೋಗಳಲ್ಲಿ ದಾಸ್ತಾನಿಸಿ ಮಾರಾಟ ಮಾಡಲಾಗುತ್ತದೆ.
ಕಚ್ಚಾ ಸಾಮಗ್ರಿ ಮಾರಾಟ ಮಳಿಗೆಗಳ ವಿವರ : -
ಕ್ರ.ಸಂ | ಡಿಪೋಗಳ ವಿವರ | ದೂರವಾಣಿ/ ಫ್ಯಾಕ್ಸ್/ ಇ-ಮೇಲ್ |
1 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ: 080-25650891 |
2 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, ನಂ.ಎ-180, 4ನೇ ಕ್ರಾಸ್, ಕೈಗಾರಿಕಾ ವಸಾಹತು,1 ನೇ ಹಂತ ಪೀಣ್ಯ, ಬೆಂಗಳೂರು-560 058 |
ದೂರವಾಣಿ : 080-28395304 ಇ-ಮೇಲ್ snlgowdajan1959@gmail com |
3 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 0816-2280263. ಇ-ಮೇಲ್ : Tmk.kssidc@gmail.com |
4 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 08192-262466. ಇ-ಮೇಲ್: kssidcdvg@rediffmail.com |
5 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 0836-2333808. ಫ್ಯಾಕ್ಸ್ : 0836-2332060. ಇ-ಮೇಲ್ : kssidchubli@gmail.com |
6 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 0831-2441171 , ಫ್ಯಾಕ್ಸ್ : 0831-2440853 ಇ-ಮೇಲ್.bgmkssidc@yahoo.com, kssidcbgm@gmail.com |
7 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 08352-253170 ಇ-ಮೇಲ್ : kssidchobijapur@yahoo.com |
8 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 0821-2515630 ಇ-ಮೇಲ್ : Ncns1960@gmail.com |
9 |
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, |
ದೂರವಾಣಿ : 08182-250607. ಇ-ಮೇಲ್: kssidcsmg@yahoo.com |
ಈ ಡಿಪೋಗಳು ಸಂಬಂಧಪಟ್ಟ ಕೈಗಾರಿಕಾ ವಸಾಹತುವಿನ ವಿಭಾಗ ಹಾಗೂ ವಲಯ ಮುಖ್ಯಸ್ಥರ ನಿಯಂತ್ರಣಕ್ಕೆ ಒಳಪಟ್ಟಿವೆ. ಮಾರಾಟದ ಬಗೆಗಳು :
1. ನಗದು ಮಾರಾಟ : ಗ್ರಾಹಕರು ಅಂದರೆ ಕೈಗಾರಿಕಾ ಟಕಗಳು ಸಾಮಗ್ರಿಯ ಸಂಪೂರ್ಣ ಮೊತ್ತ ತುಂಬಿ ಖರೀದಿಸುವುದು.
2. ಸಾಲದ ಮಾರಾಟ : ಕೈಗಾರಿಕಾ ಟಕಗಳು ಬ್ಯಾಂಕ್ ಗ್ಯಾರಂಟಿ / ಲೆಟರ್ ಆಫ್ ಕ್ರೆಡಿಟ್ ನೀಡಿದಂತ ಪ್ರಕರಣಗಳಲ್ಲಿ 30 ದಿನಗಳ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಅಷ್ಟರಲ್ಲಿ ಹಣ ಪಾವತಿಸದಿದ್ದಲ್ಲಿ ಮೊದಲ 60 ದಿನಗಳಿಗೆ ಶೇ.12ರಷ್ಟು ಹಾಗೂ ನಂತರದ ಅಂದರೆ 61 ದಿನಗಳು ಮೀರಿ ಹಣ ಪಾವತಿಸಿದಲ್ಲಿ ಶೇ.14 ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಉಪ ಪ್ರಧಾನ ವ್ಯವಸ್ಥಾಪಕರು(ಆಂತರಿಕ ಲೆಕ್ಕ ಪರಿಶೋಧನೆ):
ಆಂತರಿಕ ಲೆಕ್ಕ ಪರಿಶೋಧನಾ ಕೆಲಸ ನಿರ್ವಹಿಸುವ ಉಪ ಪ್ರಧಾನ ವ್ಯವಸ್ಥಾಪಕರು ನೇರವಾಗಿ ವ್ಯವಸ್ಥಾಪಕ ನಿರ್ದೇಶಕರವರ ಅಧೀನದಲ್ಲಿ ಇರುತ್ತಾರೆ. ಇವರು ನಿಗಮದ ಕೈಗಾರಿಕಾ ವಸಾಹತು, ವಾಣಿಜ್ಯ, ಹಣಕಾಸು, ಆಡಳಿತ, ನಿರ್ಮಾಣ ಮತ್ತು ಉಸ್ತುವಾರಿ ಇತ್ಯಾದಿ ಎಲ್ಲ ಚಟುವಟಿಕೆಗಳ ಲೆಕ್ಕ ಪರಿಶೋಧನಾ ಕಾರ್ಯಗಳ ಮೇಲ್ವಿಚಾರಣಾ ಕೆಲಸವನ್ನು ನಿರ್ವಹಿಸುತ್ತಾರೆ.
ಉಪ ಪ್ರಧಾನ ವ್ಯವಸ್ಥಾಪಕರು(ಸಿಬ್ಬಂದಿ):
ಸಿಬ್ಬಂದಿ ವಿಭಾಗದ ಕೆಲಸ ನಿರ್ವಹಿಸುವ ಉಪ ಪ್ರಧಾನ ವ್ಯವಸ್ಥಾಪಕರು ಆಡಳಿತ ಮತ್ತು ಸಿಬ್ಬಂದಿ ವಿಭಾಗಕ್ಕೆ ಸಂಬಂಧಿಸಿದಂತೆ ನಿಗಮವು ಅಳವಡಿಸಿಕೊಂಡಿರುವ ನಡತೆ ಮತ್ತು ಶಿಸ್ತು ನಿಯಮಗಳು, ವೃಂದ ಮತ್ತು ನೇಮಕಾತಿ ನಿಯಮಗಳು ಹಾಗೂ ಸೇವಾ ನಿಯಮಗಳಿಗೆ ಅನುಗುಣವಾಗಿ ಎಲ್ಲಾ ಕೆಲಸಗಳ ಮೇಲ್ವಿಚಾರಣೆ ನಡೆಸುವುದು, ನಿಗಮದ ಎಲ್ಲ ಆಯಾ ವಿಭಾಗಗಳ ಕೆಲಸಗಳಿಗೆ ಅನುಗುಣವಾಗಿ ಸಿಬ್ಬಂದಿ ನಿಯೋಜನೆಯ ಪ್ರಸ್ತಾವನೆಯನ್ನು ಸಕ್ಷಮ ಪ್ರಾಧಿಕಾರಿಗಳಿಗೆ ಸಲ್ಲಿಸುವುದು, ಇತ್ಯಾದಿ ಕಾರ್ಯನಿರ್ವಹಣೆ.
ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸುತ್ತೋಲೆ ಸಂಖ್ಯೆ. EST/PER/DP/ OFFICERS/86 ದಿನಾಂಕ 14.02.1986 (ಅನುಬಂಧ-4)ರಲ್ಲಿ ನೀಡಿರುವಂತೆ ಅಧಿಕಾರ ಹೊಂದಿರುತ್ತಾರೆ.
(5) ಸಹಾಯಕ ಪ್ರಧಾನ ವ್ಯವಸ್ಥಾಪಕರು:
ಇರುಗಳು ಉಪ ಪ್ರಧಾನ ವ್ಯವಸ್ಥಾಪಕರುಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇವರುಗಳು ನಿಯೋಜಿಸಲ್ಪಟ್ಟ ಇಲಾಖಾ/ವಿಭಾಗ/ವಿಭಾಗೀಯ ಕಛೇರಿಗಳಲ್ಲಿ ಆಯಾ ಕಛೇರಿಗಳಿಗೆ ಸಂಬಂಧಿಸಿದಂತೆ ಇಲ್ಲಾ ಕೆಲಸಗಳ ಮೇಲ್ವಿಚಾರಣೆ ಕಾರ್ಯನಿರ್ವಹಿಸುತ್ತಾರೆ. ಇವರುಗಳು ಕಛೇರಿ ಆದೇಶ ಸಂಖ್ಯೆ. EST/PER/DP/ OFFICERS/86 ದಿನಾಂಕ 14.02.1986 (ಅನುಬಂಧ-4)ರಲ್ಲಿ ನೀಡಿರುವಂತೆ ಅಧಿಕಾರ ಹೊಂದಿರುತ್ತಾರೆ.
ಇವರುಗಳ ಅಧೀನದಲ್ಲಿ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು ಮತ್ತು ಬೆರಳಚ್ಚುಗಾರರು ಕಾರ್ಯನಿರ್ವಹಿಸುತ್ತಾರೆ. ಇವರುಗಳು ಯಾವುದೇ ರೀತಿಯ ಅಧಿಕಾರವನ್ನು ಹೊಂದಿರುವುದಿಲ್ಲ, ಮೇಲಾಧಿಕಾರಿಗಳು ಹಂಚಿಕೆ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರುಗಳ ಅಧೀನದಲ್ಲಿ ಮತ್ತು ಅಧಿಕಾರಿಗಳ ಆಪ್ತ ಶಾಖೆಗಳಲ್ಲಿ ಕಡಿಕಿ ಗ್ರೂಪ್ ನೌಕರರು ಕಲಸ ನಿರ್ವಹಿಸುತ್ತಾರೆ. ಜೊತೆಗೆ ವಾಹನ ಚಾಲಕರುಗಳು ಇದ್ದು, ನಿಯೋಜನೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತಾರೆ.
ತಾಂತ್ರಿಕ ಮತ್ತು ವಿದ್ಯುತ್ ವಿಭಾಗ:
ತಾಂತ್ರಿಕ ವಿಭಾಗದಲ್ಲಿ ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರುಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸ ಕೈಗಾರಿಕಾ ವಸಾಹತುಗಳ ಸ್ಥಾಪನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಹಳೆಯ ಕೈಗಾರಿಕಾ ವಸಾಹತುಗಳ ಉನ್ನತೀಕರಣ, ಮಳಿಗೆಗಳ ನಿರ್ಮಾಣ, ಬಹುಮಹಡಿ ಕಟ್ಟಡಗಳ ನಿರ್ಮಾಣ ಮತ್ತು ಉಸ್ತುವಾರಿ, ಕೈಗಾರಿಕಾ ವಸಾಹತುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು, ನಿವೇಶನಗಳ ಮತ್ತು ಮಳಿಗೆಗಳ ಕ್ರಯಪತ್ರ (Sale Deed) ಸಂಬಂಧ ನಕ್ಷೆಗಳನ್ನು ಒದಗಿಸುವುದು, ಕಾಲಕಾಲಕ್ಕೆ ಕೈಗಾರಿಕಾ ವಸಾಹತುಗಳಿಗೆ ಭೇಟಿ ನೀಡುವುದು, K.T.P.P. ನ ಪ್ರಕಾರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯಂತೆ ಕಾಮಗಾರಿಗಳನ್ನು ವಹಿಸಿ ನಿರ್ವಹಿಸುವುದು, ಇತ್ಯಾದಿ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(iii) ಗ ನಿಗಮದ ಕೆಲಸಗಳ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯವಿಧಾನಗಳು:
ಆಡಳಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಉಪ ಪ್ರಧಾನ ವ್ಯವಸ್ಥಾಪಕರು ಮತ್ತು ಪ್ರಧಾನ ವ್ಯವಸ್ಥಾಪಕರುಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಅಧೀನ ಅಧಿಕಾರಿಗಳು ಸಲ್ಲಿಸುವ ಕಡತಗಳ ಬಗ್ಗೆ ನಿಯಮಾನುಸಾರ ಮತ್ತು ಅವರುಗಳಿಗೆ ನೀಡಿರುವ ಅಧಿಕಾರದಂತೆ ತೀರ್ಮಾನಗಳನ್ನು/ಆದೇಶಗಳನ್ನು ತಿಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ನಂತರದ ಸಕ್ಷಮ ಪ್ರಾಧಿಕಾರಿಗಳಾದ ನಿಗಮದ ವ್ಯವಸ್ಥಾಪಕ ನಿರ್ದೇಶಕರವರ ಆದೇಶ ಪಡೆಯುವ ಅಗತ್ಯವಿದ್ದಲ್ಲಿ ಕಡತಗಳನ್ನು ಅವರಿಗೆ ಸಲ್ಲಿಸಿ ಆದೇಶ ಪಡೆದು ಅವುಗಳ ವಿಲೇವಾರಿಗೆ ಕ್ರಮವಹಿಸುತ್ತಾರೆ.
ನಿರ್ಮಾಣ ಮತ್ತು ಉಸ್ತುವಾರಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರರು, ಅಧೀಕ್ಷಕ ಅಭಿಯಂತರರು ಮತ್ತು ಮುಖ್ಯ ಅಭಿಯಂತರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಅಧೀನದಲ್ಲಿ ಕೆಲಸ ನಿರ್ವಹಿಸುವ ಅಭಿಯಂತರರುಗಳು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಕಡತಗಳ ಬಗ್ಗೆ ನಿಯಮಾನುಸಾರ ಮತ್ತು ಅವರುಗಳಿಗೆ ನೀಡಿರುವ ಅಧಿಕಾರದಂತೆ ತೀರ್ಮಾನಗಳನ್ನು/ಆದೇಶಗಳನ್ನು ತಿಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ನಂತರದ ಸಕ್ಷಮ ಪ್ರಾಧಿಕಾರಿಗಳಾದ ನಿಗಮದ ವ್ಯವಸ್ಥಾಪಕ ನಿರ್ದೇಶಕರವರ ಆದೇಶ ಪಡೆಯುವ ಅಗತ್ಯವಿದ್ದಲ್ಲಿ ಕಡತಗಳನ್ನು ಅವರಿಗೆ ಸಲ್ಲಿಸಿ ಆದೇಶ ಪಡೆದು ಅವುಗಳ ವಿಲೇವಾರಿಗೆ/ ಕಾಮಗಾರಿ ನಿರ್ವಹಣೆಗೆ ಕ್ರಮವಹಿಸುತ್ತಾರೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(iv) - ನಿಗಮದ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು:
ನಿಗಮವು ತನ್ನ ಚಟುವಟಿಕೆಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಆಡಳಿತ ಮತ್ತು ಸಿಬ್ಬಂದಿ ವಿಷಯಗಳ ಬಗ್ಗೆ ವೃಂದ ಮತ್ತು ನೇಮಕಾತಿ ನಿಯಮಗಳು, ಹಾಗೂ ನಡತೆ ಮತ್ತು ಶಿಸ್ತು ನಿಯಮಗಳನ್ನು ರೂಪಿಸಿಕೊಂಡಿದ್ದು, ಈ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ (ಅನುಬಂಧ-5 ಮತ್ತು ಅನುಬಂಧ-6).
ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಿದ ನಂತರ ಮಳಿಗೆ/ನಿವೇಶನಗಳ ಹಂಚಿಕೆಗಾಗಿ ಹಂಚಿಕೆ ನಿಯಮಗಳನ್ನು ರೂಪಿಸಿಕೊಂಡಿದ್ದು, ಸದರಿ ನಿಯಮಗಳಡಿ ಕಾರ್ಯನಿರ್ವಹಿಸುತ್ತದೆ.
ನಿರ್ಮಾಣ ಮತ್ತು ಉಸ್ತುವಾರಿ ವಿಭಾಗದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಹೊಸ ಕೈಗಾರಿಕಾ ವಸಾಹತುಗಳ ಸ್ಥಾಪನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಹಳೆಯ ಕೈಗಾರಿಕಾ ವಸಾಹತುಗಳ ಉನ್ನತೀಕರಣ, ಮಳಿಗೆಗಳ ನಿರ್ಮಾಣ, ಬಹುಮಹಡಿ ಕಟ್ಟಡಗಳ ನಿರ್ಮಾಣ ಮತ್ತು ಉಸ್ತುವಾರಿ, ಕೈಗಾರಿಕಾ ವಸಾಹತುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು, ನಿವೇಶನಗಳ ಮತ್ತು ಮಳಿಗೆಗಳ ಕ್ರಯಪತ್ರ (Sale Deed) ಸಂಬಂಧ ನಕ್ಷೆಗಳನ್ನು ಒದಗಿಸುವುದು, ಕಾಲಕಾಲಕ್ಕೆ ಕೈಗಾರಿಕಾ ವಸಾಹತುಗಳಿಗೆ ಭೇಟಿ ನೀಡುವುದು, K.T.P.P. ನ ಪ್ರಕಾರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯಂತೆ ಕಾಮಗಾರಿಗಳನ್ನು ವಹಿಸಿ ನಿರ್ವಹಿಸುವುದು, ಇತ್ಯಾದಿ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(v) - ನಿಗಮದ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಮಯಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು:
1) ಮಳಿಗೆ/ನಿವೇಶನಗಳ ಹಂಚಿಕೆಗಾಗಿ ರೂಪಿಸಿರುವ ಹಂಚಿಕೆ ನಿಯಮಾವಳಿಗಳು (ಅನುಬಂಧ-7).
2) ಹಂಚಿಕೆ ನಿಯಮಾವಳಿಗಳಿಗೆ ಅನುಗುಣವಾಗಿ ಮಳಿಗೆ/ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ನಡೆಸಲು ಕಾಲಕಾಲಕ್ಕೆ ಸಕ್ಷಮ ಪ್ರಾಧಿಕಾರಿಗಳು ಹೊರಡಿಸುವ ಆಡಳಿತಾತ್ಮಕ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು.
3) ಆಕ ವಹಿವಾಟಿನ ವಿಷಯಗಳಿಗೆ ಸಂಬಂಧಿಸಿದಂತೆ ಆಕ ನೀತಿಗಳಿಗನುಗುಣವಾಗಿ ಕೆಲಸ ನಿರ್ವಹಿಸಲು ಕಾಲಕಾಲಕ್ಕೆ ಸಕ್ಷಮ ಪ್ರಾಧಿಕಾರಿಗಳು ಹೊರಡಿಸುವ ಆಡಳಿತಾತ್ಮಕ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು.
4) ವಾಣಿಜ್ಯ ವಹಿವಾಟಿನ ವಿಷಯಗಳಿಗೆ ಸಂಬಂಧಿಸಿದಂತೆ ಕಚ್ಚಾ ಸಾಮಗ್ರಿ ಖರೀದಿ ಮತ್ತು ವಿತರಣೆಗಾಗಿ ರೂಪಿಸಿಕೊಂಡಿರುವ ನಿಯಮಗಳು, ಕಾಲಕಾಲಕ್ಕೆ ಸಕ್ಷಮ ಪ್ರಾಧಿಕಾರಿಗಳು ಹೊರಡಿಸುವ ಆಡಳಿತಾತ್ಮಕ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು.
5) ನಿಗಮದ ಎಲ್ಲಾ ವಹಿವಾಟನ್ನು ವಾರ್ಷಿಕವಾಗಿ ಲೆಕ್ಕ ಪರಿಶೋಧಿಸಲು ಸಕ್ಷಮ ಪ್ರಾಧಿಕಾರಿಗಳು ಹೊರಡಿಸಿರುವ ಆದೇಶಗಳು ಮತ್ತು ಸುತ್ತೋಲೆಗಳು.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(vi) - ನಿಗಮವು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರಗಳ ಪಟ್ಟಿ:
1) ಆಡಳಿತ ವಿಭಾಗ: ವೃಂದ ಮತ್ತು ನೇಮಕಾತಿ ನಿಯಮಗಳು, ಸೇವಾ ನಿಯಮಗಳು (KCSR), ನಡತೆ ಮತ್ತು ಶಿಸ್ತು ನಿಯಮಗಳು, ಸಿಬ್ಬಂದಿ ಕಡತಗಳು, ವಾರ್ಷಿಕ ಕಾರ್ಯನಿರ್ವಹಣಾ ವರದಿ ಕಡತಗಳು, ಸಿಬ್ಬಂದಿಯ ಆಸ್ತಿ ಮತ್ತು ದಾಯಿತ್ವ ಕಡತಗಳು, ಉಪದಾನ ಕಡತಗಳು, ಸಾಮಾನ್ಯ ಸುತ್ತೋಲೆ ಕಡತಗಳು ಇತ್ಯಾದಿ. ಸಿಬ್ಬಂದಿ ವೈದ್ಯಕೀಯ ವೆಚ್ಚ ಮರುಪಾವತಿ ಕಡತಗಳು, ಶಿಸ್ತು ಕ್ರಮದ ಕಡತಗಳು, ಸ್ವೀಕೃತಿ ಮತ್ತು ರವಾನೆ ವಹಿಗಳು, ಹಾಜರಾತಿ ವಹಿ, ವಿಷಯ ನಿರ್ವಾಹಕರ ವಹಿ, ಖಾಲಿ ಹುದ್ದೆಗಳ ವಹಿ.
2) ಕೈಗಾರಿಕಾ ವಸಾಹತು ವಿಭಾಗ: ಮಳಿಗೆ/ನಿವೇಶನಗಳ ಹಂಚಿಕೆ ಕಡತಗಳು, ಹಂಚಿಕೆ ನಿಯಮಾವಳಿಗಳ ಕಡತಗಳು.
3) ಹಣಕಾಸು ವಿಭಾಗ: ಕಚ್ಚಾ ಸಾಮಗ್ರಿ ಖರೀದಿ ಮತ್ತು ಮಾರಾಟದ ವಹಿವಾಟು ನಿರ್ವಹಣೆ ವಹಿ, ಸರಕು ಮತ್ತು ಸೇವಾ ತೆರಿಗೆ, ಆದಾಯ ತೆರಿಗೆ, ಶಾಸನಬದ್ದ ವಂತಿಗೆ ಪಾವತಿ, ನಿಗದಿತ ಠೇವಣಿ, ಆಯ-ವ್ಯಯ, ಸಿಬ್ಬಂದಿ ವೇತನ, ಅಂದಾಜು ಖರ್ಚು ಮತ್ತು ಖಾತೆಗಳ ನಿರ್ವಹಣೆ ವಹಿಗಳು.
4) ನಿರ್ಮಾಣ ಮತ್ತು ಉಸ್ತುವಾರಿ ವಿಭಾಗ: ಕಾಮಗಾರಿಗಳಿಗೆ ಸಂಬಂಧಪಟ್ಟ ಕಡತಗಳು, ಕಾಮಗಾರಿಯ ಅಂದಾಜು ಪಟ್ಟಿಗಳ ಕಡತಗಳು, ಮೂರನೇ ಪಾರ್ಟಿ ಗುಣ ನಿಯಂತ್ರಣಕ್ಕೆ (Third party QA) ಸಂಬಂಧಪಟ್ಟ ಕಡತಗಳು, ಕಾಮಗಾರಿಗಳಿಗೆ ಸಂಬಂಧಪಟ್ಟ ಅಳತೆ ಪುಸ್ತಕಗಳು, ಕೇಂದ್ರ ಕಛೇರಿ ನಿರ್ವಹಣೆ ಬಗೆಗಿನ ಕಡತಗಳು.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(vii) - ನಿಗಮದ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು:
ಸಾರ್ವಜನಿಕರೊಡನೆ ಸಮಾಲೋಚಿಸುವಂತಹ ವ್ಯವಸ್ಥೆ ಇರುವುದಿಲ್ಲ. ಆದರೆ ಕಾರ್ಯನೀತಿಯ ಅನುಷ್ಠಾನಕ್ಕಾಗಿ ತೀರ್ಮಾನಿಸಲು ಆಡಳಿತ ಮಂಡಳಿ ಇರುತ್ತದೆ. ಆಡಳಿತ ಮಂಡಳಿಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸರ್ಕಾರದ ನಾಮನಿರ್ದೇಶಿತವಾಗಿರುವ ಅಧಿಕಾರೇತರ ನಿರ್ದೇಶಕರು ಇರುತ್ತಾರೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(viii) ಗ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಗಳು:
ನಿಗಮದ ಆಡಳಿತ ಮಂಡಳಿ ಅಥವಾ ಸದರಿ ಮಂಡಳಿಯು ರಚಿಸುವ ಉಪ ಸಮಿತಿಯ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ನೀಡುವ ವ್ಯವಸ್ಥೆ ಇರುವುದಿಲ್ಲ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(ix) ಗ ನಿಗಮದ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ:
ನಿಗಮದ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆಯನ್ನು (Directory) ಅನುಬಂಧ-8 ರಲ್ಲಿ ಇರಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(x) ಗ ನಿಗಮದ ನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ಮಾಸಿಕ ವೇತನದ ವಿವರ:
ನಿಗಮದ ಅಧಿಕಾರಿ ಮತ್ತು ನೌಕರರು ಪಡೆಯುವ ಮಾಸಿಕ ವೇತನದ ವಿವರಗಳನ್ನು ಅನುಬಂಧ-9 ರಲ್ಲಿ ತೋರಿಸಿರುವಂತೆ ಇರು್ತ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xi) ಗ ನಿಗಮದ ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯದ ವಿವರಗಳು:
ವಿವರಗಳು ಅನುಬಂಧ-10 ರಲ್ಲಿ ತೋರಿಸಿರುವಂತೆ ಇರುತ್ತವೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xii) ಗ ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:
ವಿವರಗಳು ಅನುಬಂಧ-11 ರಲ್ಲಿ ತೋರಿಸಿರುವಂತೆ ಇರುತ್ತವೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xiii) ಗ ನಿಗಮವು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ:
ವಿವರಗಳು ಅನುಬಂಧ-11 ರಲ್ಲಿ ತೋರಿಸಿರುವಂತೆ ಇರುತ್ತವೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xiv) ಗ ನಿಗಮದ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು:
ನಿಗಮದಲ್ಲಿ ಇ.ಆರ್.ಪಿ. ತಂತ್ರಾಂಶ ಮತ್ತು ವೆಬ್ ಸೌಲಭ್ಯಗಳು ಲಭ್ಯವಿದ್ದು, ಅವುಗಳಲ್ಲಿ ಸಿಬ್ಬಂದಿ ಅಂಕಿ ಅಂಶಗಳು, ಸಿಬ್ಬಂದಿಗಳಿಗೆ ನೀಡುತ್ತಿರುವ ವೇತನ ವಿವರ, ಮಂಡಳಿ ನಿರ್ದೇಶಕರ ವಿವರ, ಟೆಂಡರ್ ಪ್ರಕಟಣೆಗಳನ್ನು ಇ-ಪೋರ್ಟಲ್ ಮೂಲಕ ನಿರ್ವಹಿಸುವುದು, ವಿದ್ಯುನ್ಮಾನ ರೂಪದಲ್ಲಿ ಲಭ್ಯವಿದೆ. ವೆಬ್ ಸೈಟ್ ಸಂಖ್ಯೆ. www.kssidc.co.in , ERP, file tracking.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xv) ಗ ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರ:
ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯವನ್ನು ನಿರ್ವಹಿಸುವ ವ್ಯವಸ್ಥೆ ಇರುವುದಿಲ್ಲ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xvi) ಗ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರ:
ವಿವರಗಳು ಅನುಬಂಧ-12 ರಲ್ಲಿ ತೋರಿಸಿರುವಂತೆ ಇರುತ್ತವೆ.
ಮಾಹಿತಿ ಹಕ್ಕು ಕಾಯ್ದೆ 4(1)(ಬಿ)(xvii) ಗ ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸತಕ್ಕದ್ದು:
ಪರಿಷ್ಕರಣೆಯಾದಂತೆ ಬದಲಾವಣೆ ಮಾಡಲು ಕ್ರಮವಹಿಸಲಾಗುವುದು.