ಕಂಪನಿಯ ರಚನೆ
ನಿಗಮದ ಮುಖ್ಯಸ್ಥನಾಗಿ ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ, ಮೂರು ಪ್ರಧಾನ ವ್ಯವಸ್ಥಾಪಕರುಗಳು, ಎರಡು ಉಪ ಪ್ರಧಾನ ವ್ಯಸ್ಥಾಪಕರುಗಳು ಮತ್ತು ಮುಖ್ಯ ಇಂಜಿನಿಯರ್ ಇರುತ್ತಾರೆ. ಕಂಪನಿ ಬೆಂಗಳೂರಿನಲ್ಲಿ ಮುಖ್ಯ ಕಛೇರಿ ಹೊಂದಿರುವುದಲ್ಲದೆ, ಎರೆಡು ವಲಯಗಳಲ್ಲಿನ ಕಛೇರಿಗಳನ್ನು ಹೊಂದಿದೆ. ಬೆಂಗಳೂರು, ಹುಬ್ಬಳ್ಳಿ ನಲ್ಲಿ ಹೊಂದಿದೆ. ನಿಗಮವು 7 ವಿಭಾಗೀಯ ಕಛೇರಿಗಳನ್ನು ಹೊಂದಿದ್ದು ಪ್ರಧಾನ ವ್ಯವಸ್ಥಾಪಕ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ ಅಲ್ಲದೆ 9 ಕಚ್ಚಾ ಸಾಮಾಗ್ರಿಗಳ ಮಳಿಗೆಗಳನ್ನು ಕರ್ನಾಟಕದ ಉದ್ದಗಲಕ್ಕೂ ಹೊಂದಿದೆ. ಪ್ರಸ್ತುತ ನಿಗಮದಲ್ಲಿ 177 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ನಿಗಮವು ತನ್ನ ಎಲ್ಲಾ ಕೆಲಸಗಳನ್ನು ಗಣಕೀಕೃತಗೊಳಿಸಿದೆ ಮತ್ತು ತನ್ನ ಎಲ್ಲಾ ಕೇಂದ್ರಗಳಲ್ಲು ವಾಸ್ತು ಸ್ಥಿತಿಗಳು ತಲುಪುತ್ತಿರುತ್ತವೆ. ಗಣಕಯಂತ್ರವನ್ನು ಮುಖ್ಯವಾಗಿ, ಸಂಬಳ ನೀಡಲು, ಹಣಕಾಸು ಖಾತೆಗಳು, ಕಚ್ಚಾವಸ್ತುಗಳ ಲೆಕ್ಕಮಾಡಲು, ಬಡ್ಜಟ್ ತಯಾರಿಸಲು, ಟೆಂಡರ್ ಮತ್ತು ನಿರ್ವಹಣೆ ಮಾಹಿತಿಯನ್ನು ಪರಿಷ್ಕರಿಸಲು ಉಪಯೋಗಿಸಲಾಗುತ್ತದೆ. ಕಂಪನಿಯು ಕಾರ್ಯ ನಿರ್ವಹಣೆ ವಿಧಾನವನ್ನು ಇನ್ನೂ ಹೆಚ್ಚು ಸುಲಭಗೊಳಿಸಲು ಪ್ರಯತ್ನಿಸುತ್ತಿದ್ದು ವಿಕೇಂದ್ರೀಕರಣಗೊಳಿಸುವುದರೊಂದಿಗೆ, ನಿರ್ಧಾರಗಳನ್ನು ವಿವಿಧ ಹಂತಗಳಲ್ಲಿ ಕೈಗೊಳ್ಳುವ ಅನುವುಮಾಡಿಕೊಡಲಾಗಿದೆ.