ಸಂಸ್ಥೆಯ ಇತಿಹಾಸ
ಕ.ಎಸ್.ಎಸ್.ಐ.ಡಿ.ಸಿ (ಹಿಂದಿನ ಮೈಸೂರು ಸಣ್ಣ ಕೈಗಾರಿಕೋಧ್ಯಮ ಸಂಸ್ಥೆ)ಯು ರಾಜ್ಯದ ಒಂದು ಸಣ್ಣ ವಲಯಕ್ಕೆ ೪೦ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಸಂಸ್ಥೆ ನಡೆದು ಬಂದ ಹಾದಿಯನ್ನು ಹಿಂತಿರುಗಿ ನೋಡಿದರೆ,ಒಂದು ಅರ್ಥಪೂರ್ಣ ಹಾಗು ತೃಪ್ತಿಧಾಯಕ ಸಾಧನೆಗಳೇ ಕಣ್ಣಿಗೆ ಕಾಣುತ್ತದೆ. ಬಹಳ ಸಾಧಾರಣವಾಗಿ ಬೆಂಗಳೂರು ಹೊರವಲಯದ ಒಂದು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಸಂಸ್ಥೆ, ರಾಜಾಜಿನಗರದ ಕೈಗಾರಿಕಾ ಪ್ರದೇಶಕ್ಕೆ ವರ್ಗಾವಣೆಗೊಂಡಿತು. ೧೯೬೦ರವರೆಗೆ, ರಾಜ್ಯ ಸರ್ಕಾರ ಉದ್ಯೋಗ ಮತ್ತು ವಾಣಿಜ್ಯ ಶಾಖೆಯು ಸರ್ಕಾರದ ಸಣ್ಣ ಕೈಗಾರಿಕೋಧ್ಯಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿತ್ತು. ೧೯೬೦ರ ನಂತರ, ಎಮ್.ಎಸ್.ಐ.ಸಿ., ನಂತರ ಕೆ.ಎಸ್.ಎಸ್.ಐ.ಡಿ.ಸಿ ಈ ಕಾರ್ಯನಿರ್ವಹಣಾ ಜವಾಬ್ದಾರಿಯನ್ನು ಪಡೆದು, ಕಾರ್ಯ ನಿರ್ವಹಣೆ,ಕೈಗಾರಿಕಾ ಪ್ರದೇಶ ನಿರ್ಮಾಣ, ಕಚ್ಚಾ ಸಾಮಾಗ್ರಿಗಳು ಹಂಚಿಕೆ, ಅಭಿವೃದ್ಧಿಗೆ ಒಂದು ಹೊಸ ಆಯಾಮ ನೀಡಿತು. ೧೦ ಲಕ್ಷ ರುಪಾಯಿಗಳ ಪಾಲುದಾರಿಕೆಯಲ್ಲಿ ಪ್ರಾರಂಭವಾದ ಸಂಸ್ಥೆಯು ಕ್ರಮೇಣವಾಗಿ ಮೇಲೆ ಸಾಗಲು ಪ್ರಾರಂಭಿಸಿತು. ಮೊದಲ ಹತ್ತುವರ್ಷದಲ್ಲಿ ರಾಜ್ಯ ಸರ್ಕಾರ ವಂತಿಗೆಯು ೨೦ಲಕ್ಷ ತಲುಪಿತ್ತು. ೨೦೧೫ ರ ಮಾರ್ಚ್ ೩೧ ರ ಅಂತ್ಯದ ವೇಳೆಗೆ ಕಂಪನಿಯ ಪಾವತಿಸಿದ ಷೇರು ಬಂಡವಾಳವು ರೂ .೨೬೦೨.೩೬ ಲಕ್ಷಗಳು.
ಸಂಸ್ಥೆಯು ಕೆಳಗಿನ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಪ್ರಾರಂಭವಾಯಿತು:
- ಕೈಗಾರಿಕ ಪ್ರದೇಶ ಸ್ಥಾಪನೆ ಮತ್ತು ನಿರ್ವಹಣೆ.
- ಕಚ್ಚಾ ಸಾಮಾಗ್ರಿಗಳನ್ನು ಪಡೆದು ಹಂಚುವುದು.
- ಉತ್ಪಾದನೆಯ ಮಾರಟದಲ್ಲಿ ಅನುವಾಗುವುದು.
- ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಪ್ರದರ್ಶನಗಳಲ್ಲಿ ಪಾಲ್ಗೊಂಡು ಇವರ ಉತ್ಪಾದನೆಯನ್ನು ವಿಸ್ತರಿಸುವುದು.
- ಯಂತ್ರೋಪಕರಣಗಳನ್ನು ಬಾಡಿಗೆ ಅಥವಾ ಸ್ವಂತಕ್ಕೆ ಪಡೆಯುವ ವ್ಯವಸ್ಥೆ ಮಾಡುವುದು.
- ಸಣ್ಣ ಕೈಗಾರಿಕೋಧ್ಯಮಿಗಳಿಗೆ ಮಾರ್ಗದರ್ಶನ ನೀಡುವುದು.
- ತಾಂತ್ರಿಕ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸುವುದು.