ಕೆ.ಎಸ್.ಎಸ್.ಐ.ಡಿ.ಸಿ.ಯ ಒಂದು ಭಾಗವಾಗುವುದರೊಂದಿಗೆ ಪಡೆಯಬಹುದಾದ ಲಾಭ
ಕೆ.ಎಸ್.ಎಸ್.ಐ.ಡಿಸಿಯು ಎಲ್ಲಾ ವಾಸ್ತವಿಕ ಉದ್ದೇಶಗಳಿಗಾಗಿ ಕೇಂದ್ರಿಕೃತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಸ್ತಿರಾಸ್ಥಿಯನ್ನು ಖಾಸಗಿ ಸ್ತಿರಾಸ್ಥಿಗಳಿಂದ ಬಿನ್ನವಾಗುವಂತೆ ಗುರುತಿಸಲಾಗಿರುತ್ತೆ
ಇದರ ಭಾಗವಾಗುವುದರೊಂದಿಗೆ ಪಡೆಯುವ ಲಾಭಗಳು:
- ಕೆ.ಎಸ್.ಎಸ್.ಐ.ಡಿ.ಸಿ ಜಾಗವು, ಕೇವಲ ಕೈಗಾರಿಕ ಉದ್ದೇಶಗಳಿಗೆ ಮಾತ್ರ ಮೀಸಲಾಗಿರುತ್ತದೆ. ಹೀಗಾಗಿ, ಸರ್ಕಾರದಿಂದ ಸಮ್ಮತಿ ಪತ್ರಕ್ಕಾಗಿ ಕಾಯುವ ಸಮಯ ಉಳಿತಾಯ. ಸಂಸ್ಥೆಯು ಆ ಪ್ರದೇಶಕ್ಕಾಗಿ ಸೂಕ್ತ ವಾತಾವರಣದಲ್ಲಿ, ನೀರು, ವಿದ್ಯುತ್, ಸಂಪರ್ಕ ಹಾಗು ಕೈಗಾರಿಕ ಹೊರಹೊಮ್ಮುವ ಕಸವನ್ನು ಕೂಡಿಡುವುದಕ್ಕೆ ವ್ಯವಸ್ಥೆಯೊಂದಿಗೆ, ಒಂದು ಸುಸಜ್ಜಿತ ಪಕ್ವಗೊಳಿಸಿದ ಹಾಗು ರಚನಾಕ್ರಮದನುಸಾರವಾಗಿ ವೃದ್ಧಿಸಲಾಗಿರುತ್ತೆ.
- ಕೆ.ಎಸ್.ಎಸ್.ಐ.ಡಿ.ಸಿ ಸ್ಥಿರಾಸ್ತಿಯಲ್ಲಿ ಅಗತ್ಯವಾಗುವ ತರಬೇತಿ ಕೇಂದ್ರ, ಚಿಕಿತ್ಸಾಲಯ, ಪೊಲೀಸ್ ಚೌಕಿ, ಸಾಮುಹಿಕ ಉದ್ಯಾನವನ, ಬ್ಯಾಂಕ್ಗಳು, ಕ್ಯಾಂಟಿನ್ ಮುಂತಾದವುಗಳನ್ನು ಒದಗಿಸಲಾಗುತ್ತದೆ.
- ಎಲ್ಲಾ ಕಟ್ಟಡಗಳು ಅಥವ ಜಾಗಗಳು ಒತ್ತುವರಿಯಿಂದ ಮುಕ್ತವಾಗಿದೆ ಹಾಗು ಈ ಜಾಗಗಳನ್ನು ಮುಂದೆ ಮಾರಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ.
- ಬಂಡವಾಳ ಹೂಡಿಕೆದಾರರು ಭೂಮಿಯ ಸ್ವಾಧೀನ ಪತ್ರ ಪಡೆದು ಅದಕ್ಕೆ ಅಗತ್ಯ ಶುಲ್ಕ ನೀಡಿದರೆ, ಅಲ್ಲಿ ಕೈಗಾರಿಕೋಧ್ಯಮ ಪ್ರಾರಂಭಿಸಲು ಅನುವು ಮಾಡಿಕೊಡಲಾಗುತ್ತದೆ.
- ಕೆ.ಎಸ್.ಎಸ್.ಐ.ಡಿ.ಸಿ ಶೀಘ್ರವಾಗಿ ಕೈಗಾರಿಕೋಧ್ಯಮ ಪ್ರಾರಂಭಿಸಲು ವ್ಯವಸ್ಥಿತ ಮಳಿಗೆಗಳನ್ನು ನೀಡಲಾಗುತ್ತೆ ಹಾಗು ಸಾಮಾಗ್ರಿಗಳನ್ನು ಸಂಗ್ರಹಿಸಲು ಶೇಖರಣ ಘಟಕಗಳು ಸಹ ಇರುತ್ತದೆ.
- ಕೆ.ಎಸ್.ಎಸ್.ಐ.ಡಿ.ಸಿ ಸರ್ಕಾರದ ಒಂದು ಭಾಗವಾಗಿರುವುದರಿಂದ, ಅದರ ಕಟ್ಟಡ/ಭೂಮಿ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಯಿಂದ ಇರುತ್ತದೆ. ಹಣಕಾಸು ನೆರವು ಒದಗಿಸುವ ಸಂಸ್ಥೆಗಳಿಂದ ಸುಲಭವಾಗಿ ಸಾಲ ಒದಗಿಸುತ್ತದೆ.
- ಕೆ.ಎಸ್.ಎಸ್.ಐ.ಡಿ.ಸಿಯು ಕಚ್ಚಾ ವಸ್ತುಗಳು, ವ್ಯಾಪಾರ ತಂತ್ರಜ್ಞಾನ, ಸಂಪರ್ಕ ಒದಗಿಸುವ ವಿಷಯಗಳಲ್ಲಿ ಸಮೂಹ ಲಾಭಗಳನ್ನೊಳಗೊಂಡ ಅನನ್ಯ ಸದವಾಕಾಶವನ್ನು ಒದಗಿಸುತ್ತದೆ.
- ಕೆ.ಎಸ್.ಎಸ್.ಐ.ಡಿ.ಸಿ ತೆಗೆದುಕೊಳ್ಳುವ ಯಾವುದಾದರು ಮೇಲ್ದರ್ಜೆಗೇರಿಸುವ ಕಾರ್ಯಕ್ರಮಗಳಿಂದ ಆ ಪ್ರದೇಶದ ಎಲ್ಲಾ ಸಣ್ಣ ಕೈಗಾರಿಕೋಧ್ಯಮಗಳೂ ಲಾಭ ಪಡೆಯುತ್ತದೆ.
- ಕೆ.ಎಸ್.ಎಸ್.ಐ.ಡಿ.ಸಿಯು ಭೂಮಿ ಪಡೆಯುವ ಹಾಗು ನೇಮಿಸುವ ವಿಷಯದಲ್ಲಿ, ಸಣ್ಣ ಕೈಗಾರಿಕೋಧ್ಯವ್ಯಮಗಳಿಗೆ ವಿಶೇಷ ಸೇವೆ ಒದಗಿಸಲಾಗುವುದು.
- ಕೆ.ಎಸ್.ಎಸ್.ಐ.ಡಿ.ಸಿಯು ಎಸ್.ಸಿ./ಎಸ್.ಟಿ./ಎಸ್.ಇ.ಡಿ.ಸಿ. ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ನಂತರದಲ್ಲಿ ಹಿಂದುಳಿದ ಭಾಗಗಳ ನಿರ್ಗತಿಕ ಎಸ್.ಸಿ. ಮತ್ತು ಎಸ್.ಟಿ ಸಮೂಹಗಳಿಗೆ ಪ್ರೋತ್ಸಾಹ ಧನ ಹಾಗು ಕಡಿತಗೊಳಿಸಿದ ಇ.ಎಮ್.ಡಿ./ಅರ್ಜಿ ಶುಲ್ಕ/ ಪರಿಶೋಧನ ಶುಲ್ಕ ಕಟ್ಟುವ ವ್ಯವಸ್ಥೆ ಮಾಡಲಾಗುವುದು.
- ಕೆ.ಎಸ್.ಎಸ್.ಐ.ಡಿ.ಸಿಯ ವಿಭಾಗೀಯ ಕಛೇರಿಗಳಲ್ಲಿ ಕಚ್ಚಾವಸ್ತುಗಳ ಶೇಖರಣ ಘಟಕ ಸ್ಥಾಪಿಸಿ, ಸಣ್ಣ ಕೈಗಾರಿಕೋಧ್ಯಮಗಳಿಗೆ ನೀಡಲಾಗುವುದು
- ಕೆ.ಎಸ್.ಎಸ್.ಐ.ಡಿ.ಸಿ ಯ ಸ್ಥಿರಾಸ್ತಿಯು, ಐ.ಎಸ್.ಐ ಮಾನ್ಯತೆ ಪಡೆದ ಘಟಕಗಳನ್ನು ಸ್ಥಾಪಿಸುವ ಮೂಲಕ, ಗುಣಾತ್ಕಕ ಉತ್ಪನ್ನಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತದೆ.
- ಕೆ.ಎಸ್.ಎಸ್.ಐ.ಡಿ.ಸಿ ಯು ಸೇವಾ ಶುಲ್ಕವನ್ನು ವಾರ್ಷಿಕವಾಗಿ ಪಡೆದುಕೊಳ್ಳುತ್ತದೆ. ಕೆ.ಎಸ್.ಎಸ್.ಐ.ಡಿ.ಸಿ ಸ್ಥಿರಾಸ್ತಿಯಲ್ಲಿನ ಸಣ್ಣ ಕೈಗಾರಿಕೋಧ್ಯಮಗಳಿಗೆ, ಯಂತ್ರೋಪಕರಣ ಹಾಗು ಕಚ್ಛಾ ವಸ್ತುಗಳನ್ನು ಕೊಳ್ಳಲು ವಿವಿಧ ಹಣಕಾಸು ಸಂಸ್ಥೆ ಹಾಗು ರಾಷ್ಟ್ರೀಕೃತ ಬ್ಯಾಂಕುಗಳು ಸಲಭವಾಗಿ ಬಂಡವಾಳ ಒದಗಿಸುತ್ತದೆ.