ಕೆ.ಎಸ್.ಎಸ್.ಐ.ಡಿ.ಸಿ. ಸಂಘಟನೆಯ ಜ್ಞಾಪ ಪತ್ರ
ದಾಖಲಾಗಿ ಮಾನ್ಯತೆ ಪಡೆದ ಈ ಸಂಸ್ಥೆಯ ಕಛೇರಿಯು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತಗೊಂಡಿರುತ್ತದೆ.
ಸಂಸ್ಥೆಯ ಸ್ಥಾಪನೆಯ ಹಿಂದಿರುವ ಉದ್ದೇಶಗಳು:
ಕಾನೂನು ಸಹಾಯ, ಬಂಡವಾಳ ಹೂಡಲು ಸಾಲ, ಸಣ್ಣ ಕೈಗಾರಿಕೋಧ್ಯಮವನ್ನು ಉಳಿಸಿ, ಬೆಳೆಸಿ, ಸರ್ಕಾರ ಅಥವ ಸರ್ಕಾರೇತರ ಖಾಸಗಿ ಸಂಸ್ಥೆಯಾಗಲಿ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸಮಸ್ಥೆಯಾಗಲಿ, ಅದಕ್ಕೆ ಬಂಡವಾಳ, ಸಾಲ ಒದಗಿಸೋದು, ತಾಂತ್ರಿಕ ಮತ್ತು ಕಾರ್ಯ ನಿರ್ವಹಿಸುವ ವಿಧಾನದಲ್ಲಿ ನೆರವಾಗುವುದು. ಅವರಿಗೆ ಪ್ರಸ್ತುತ ಆಧುನಿಕ ಉತ್ಪಾದನೆಯ ಬಗ್ಗೆ, ನಿರ್ವಹಣೆ ಹಾಗು ಪ್ರಸ್ತುತ ಮಾರುಕಟ್ಟೆಯ ವಿಷಯವಾಗಿ ಸಮಗ್ರ ಮಾಹಿತಿ ದೊರಕಿಸುವುದು " ಕರ್ನಾಟಕ ರಾಜ್ಯದಲ್ಲಿ ಉಧ್ಯಮಕ್ಕೆ ಮೀಸಲಿಟ್ಟ ಜಾಗದಲ್ಲಿ ಕಟ್ಟಡ ನಿರ್ಮಿಸಿ, ಬೆಳೆಸಿ ಹಾಗು ಅದನ್ನು ನೋಡಿಕೊಳ್ಳೋದು". (Approved by the Company Law Board vide their order No.47117/SRB/85 dated 18.7.85)
ರಾಜ್ಯ ಅಥವ ಕೇಂದ್ರ ಸರ್ಕಾರದ ಸುಪರ್ಧಿಗೆ ಒಳಪಡುವ ಎಲ್ಲಾ ಇಲಾಖೆಗಳು, ನಿಗಮಗಳು, ಉಪ ವಿಭಾಗಗಳೊಂದಿಗೆ ಒಪ್ಪಂದ ಮಾಡಿಕೊಂಡು ಬಡಾವಣೆ, ಉತ್ಪಾದನೆ, ಜೋಡಣೆ ಮತ್ತು ಅವಶ್ಯ ವಸ್ತುಗಳ ಸರಬರಾಜು ನಿಯಂತ್ರಿಸುವ ಅಧಿಕಾರ ಪಡೆದು ತಾನೆ ಮುಂದಾಳತ್ವದಲ್ಲಿ ಒದಗಿಸಲಾಗದನ್ನು ಮತ್ತೊಂದು ಉದ್ಯಮದ ಜೊತೆ ಒಳಕರಾರು ಮಾಡಿಕೊಂಡು ಬಡಾವಣೆ, ಉತ್ಪಾದನೆ, ಜೋಡಣೆ ಮತ್ತು ಅವಶ್ಯ ವಸ್ತುಗಳ ಸರಬರಾಜು, ಅದನ್ನು ಸಂಸ್ಕರಿಸುವ, ಒಪ್ಪಂದದಲ್ಲಿ ಏನಾದರು ವ್ಯತ್ಯಾಸ ಕಂಡುಬಂದಲ್ಲಿ ತನ್ನ ವ್ಯವಸ್ಥಾಪನೆಯಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸುವುದು.
ನಿರ್ಧಿಷ್ಟ ಸರ್ಕಾರಿ ಅಧಿಕಾರಿಗಳೊಡನೆ ಹೊಂದಾಣಿಕೆಯಿಂದ, ಅವರ ಸಲಹೆ ಮೇರೆಗೆ ಸಣ್ಣ ಕೈಗಾರಿಕೋಧ್ಯಮದ ಉತ್ಪಾದನ ಮಟ್ಟವನ್ನು ಕಾಪಾಡಿಕೊಂಡು ಹೋಗುವುದು.
ಸರ್ಕಾರದೊಂದಿಗೆ ಕರಾರು ಮಾಡಿಕೊಂಡ ಉಧ್ಯಮವು, ತಾನು ಮತ್ತೊಂದು ಸಣ್ಣ ಕೈಗಾರಿಕೋಧ್ಯಮದೊಂದಿಗೆ ಮಾಡಿಕೊಂಡಿರುವ ಒಳ ಕರಾರಿನಲ್ಲಿ ಅನುಸರಿಸಿರುವ ವಿಧಾನ ಮತ್ತು ಆ ಸಣ್ಣ ಕೈಗಾರಿಕೋಧ್ಯಮಕ್ಕೆ ಕಡಿಮೆ ಮಟ್ಟದಲ್ಲಿ ನ್ಯಾಯ ಸಮ್ಮತ ಬೆಲೆಯಲ್ಲಿ ತಯಾರಿಸುವಂತೆ ನೀಡಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಕೂಲಂಕುಶವಾಗಿ ಪರೀಕ್ಷಿಸುವುದು.
ಒಬ್ಬ ಸಮರ್ಥ್ಯ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿ, ವರ್ತಮಾನದ ಮಾರುಕಟ್ಟೆಯಲ್ಲಿರುವ ಸ್ಪರ್ಧೆಯ ಅನುಗುಣವಾಗಿ, ಉತ್ಪಾದನೆಯ ಸಾಮರ್ಥ್ಯ, ನೀಡಿರುವ ಸಾಲದ ಬಗ್ಗೆ ನಿಗಾವಹಿಸೋದು.
ಸರ್ಕಾರ, ಮಂತ್ರಿ ಮಂಡಳಿ, ಶಾಖೆಗಳು ಮಾಡಿಕೊಂಡಿರುವ ಒಪ್ಪಂದ-ಒಳ ಒಪ್ಪಂದ, ವ್ಯಾಪಾರ ಮಾಡುವ ಸಲುವಾಗಿ ಪಡೆದಿರುವ ಸಾಲಗಳ ಪೂರ್ಣ ವಿವರ ಪಡೆಯಬೇಕು
ಒಳ ಒಪ್ಪಂದ, ಆದೇಶ ಪಡೆದಿರುವ ಸಣ್ಣ ಕೈಗಾರಿಕೋಧ್ಯಮಗಳಿಗೆ ಸಾಲ ಪಡೆಯಲು ಶಿಫಾರಸು ಮಾಡುವುದು, ಒಳ ಒಪ್ಪಂದ ಮಾಡಿಕೊಂಡಿರುವ ಸಣ್ಣ ಉಧ್ಯಮಗಳು ಕಟ್ಟಡದ ನಿರ್ಮಾಣ, ಅದರ ಪರಿವರ್ತನೆ, ವಿಸ್ತರಿಸಲು ಸಾಲ, ನಿರ್ಮಿಸಿದ ಕಟ್ಟಡದಲ್ಲಿ ಉಪಕರಣಗಳನ್ನು ಕೊಂಡುಕೊಳ್ಳಲು, ಕಚ್ಚಾ ವಸ್ತುಗಳನ್ನು ಕೊಂಡುಕೊಳ್ಳಲು, ತಯಾರಿಸಿದ ಉತ್ಪನ್ನಗಳ ಸಾಗಣೆಗೆ ಮಾಡಿಕೊಂಡಿರುವ ಒಪ್ಪಂದ ಅಂತಿಮಗೊಳಿಸುವುದು. ಸರ್ಕಾರದ ಸುಪರ್ಧಿಗೆ ಬರುವ ಈ ಉಧ್ಯಮಗಳಿಗೆ ಆರ್ಥಿಕ, ತಾಂತ್ರಿಕ, ನಿರ್ವಹಣೆಯಲ್ಲಿ ಹಾಗು ಮುಂತಾದ ಕಾರ್ಯಗಳಲ್ಲಿ ಅನುವಾಗುವುದು. ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ತೃಪ್ತಿಕರವಾಗಿ ಕಾರ್ಯ ನಿರ್ವಹಿಸಲು ಅನುವಾಗುವುದು ಮತ್ತು ನಮ್ಮ ಬೇಡಿಕೆಗೆ ತಕ್ಕಂತೆ ಒಪ್ಪಂದ ಮಾಡಿಕೊಮಡಿರುವ ಕಂಪನಿಗಳು ನಿರ್ವಹಿಸುತ್ತಿದ್ದಾರ ಎಂಬುದರ ಬಗ್ಗೆ ಆದೇಶ ಹೊರಡಿಸೋದು, ಅನುವಾಗೋದು, ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡುವುದು.
ದೊಡ್ಡ ಹಾಗು ಸಣ್ಣ ಕೈಗಾರಿಕೋಧ್ಯಮಗಳ ನಡುವೆ ಒಂದು ವಿವಿಧ ಮಾರ್ಗಗಳಲ್ಲಿ ಸಮತೋಲನವನ್ನು ಕಾಪಾಡುವುದು, ಮೊದಲು ತಿಳಿಸಿದಂತೆ, ಸಣ್ಣ ಕೈಗಾರಿಕೋಧ್ಯಮಗಳು ದೊಡ್ಡ ಕೈಗಾರಿಕೋಧ್ಯಮಗಳಿಗೆ ತೃಪ್ತಿಕರವಾಗುವಂತೆ ಬಿಡಿಭಾಗಗಳು, ಉಪಕರಣಗಳು ಮುಂತಾದವುಗಳನ್ನು ತಯಾರಿಸುವಂತೆ ನೋಡಿಕೊಳ್ಳುವುದು.
ನಮ್ಮ ದೇಶದಲ್ಲಿರುವ ಸಣ್ಣ ಕೈಗಾರಿಕೋಧ್ಯಮಗಳನ್ನು ಉತ್ತೇಜಿಸಿ ಮತ್ತು ಅದರ ಕಾರ್ಯ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಸೃಷ್ಠಿಸುವುದು ಮತ್ತು ಈ ನಿಟ್ಟಿನಲ್ಲಿ ಬೇಕಾದ ವರದಿ, ನೀಲಿನಕ್ಷೆ, ಅಂಕಿ ಅಂಶ ಮತ್ತು ಇನ್ನಿತರ ಅಂಶಗಳನ್ನು ಪಡೆಯುವುದು.
ಇಂತಹ ಕಂಪನಿಗಳನ್ನು ಉತ್ತೇಜಿಸಿ ಮತ್ತು ಸ್ಥಾಪನೆಗೆ ಅನುವಾಗಿ, ಅದಕ್ಕಾಗಿಯೇ ಒಂದು ಸಲಹಾ ಮಂಡಳಿ ಮತ್ತು ಇನ್ನಿತರ ಸಂಸ್ಥೆಗಳನ್ನು ಸೃಷ್ಠಿಸಿ ಮೇಲೆ ವಿವರಿಸಿದ ಉದ್ದೇಶಗಳು ತೃಪ್ತಿದಾಯಕವಾಗಿ ಹೊರಹೊಮ್ಮುವಂತೆ ಮಾಡುವುದು.
ಬಂಡವಾಳ ಅಥವ ಸಾಲ ಪಡೆಯಲು ಅನುಕೂಲ, ಉಪಕರಣ ಒದಗಿಸುವುದು, ತಾಂತ್ರಿಕ ಮತ್ತು ನಿರ್ವಹಣೆಯಲ್ಲಿ ನೆರವು, ಮಾಹಿತಿ, ಆದೇಶ, ಮೇಲ್ವಿಚಾರಣೆ, ತಪಾಸಣೆ ಮತ್ತು ಇನ್ನಿತರ ಸೌಲಭ್ಯಗಳು ಯಾವುದೇ ಕಂಪನಿ, ವ್ಯಕ್ತಿ ಅಥವ ಸಂಸ್ಥೆಯು ಮೇಲೆ ತಿಳಿಸಿರುವ ಬೇಡಿಕೆಗಳನ್ನು ಶಕ್ತವಾಗಿ ನಿರ್ವಹಿಸಲು ಅನುವಾಗುವುದು.
ಟೆಂಡರ್ ಅಥವಾ ಕೊಂಡುಕೊಳ್ಳುವುದು ಅಥವಾ ಒಪ್ಪಂದದ ಮೂಲಕ, ನಿರ್ಮಾಣ, ಉತ್ಪಾದನೆ, ಕಾರ್ಯವೈಖರಿ, ಯಂತ್ರೋಪಕರಣ, ಮೇಲ್ದರ್ಜೆ, ನಿರ್ವಹಣೆ, ಕೆಲಸದ ನಿಯಮಗಳು, ಭತ್ಯೆ, ಕ್ರಯ ಮಾಡು, ಮಾರಾಟ ಅಥವಾ ಮರು ಉಪಯೋಗ ಮುಂತಾದವುಗಳು.