ಎಫ್.ಎ.ಕ್ಯೂ

ಪುನರಾವರ್ತಿತ ಪ್ರಶ್ನೆಗಳು (ಎಫ್.ಎ.ಕ್ಯೂ)

1. ನಿಗಮದ ವತಿಯಿಂದ ಸ್ಥಾಪನೆಗೊಂಡ ನಿವೇಶನಗಳ ಸ್ವರೂಪವೇನು?

  • ಉ. ನಿಗಮದ ವತಿಯಿಂದ ಅಭಿವೃದ್ಧಿಗೊಂಡಿರುವ ರಾಜ್ಯದ ನಿವೇಶನಗಳ ಅಳತೆ ಡಿ(೭೮೫ಚ.ಅಡಿ), ಎಮ್(೧೦೪೫ಚ.ಅಡಿ), ಪಿ(೯೦೩ಚ.ಅಡಿ), ಕ್ಯೂ(೫೪೬ಚ.ಅಡಿ), ಆರ್(೩೭೮ ಚ.ಅಡಿ), ಎಸ್(೨೪೩ ಚ.ಅಡಿ).

2. ಕಚ್ಚಾ ವಸ್ತುಗಳ ಸಂಗ್ರಹಾಲಯಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ಸ್ಥಪಿಸಲಾಗಿದೆಯೇ?

  • ಉ. ನಾವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಚ್ಚಾ ವಸ್ತುಗಳ ಸಂಗ್ರಹಾಲಯ ಸ್ಥಾಪಿಸಿ, ಸಣ್ಣ ಕೈಗಾರಿಕೋಧ್ಯಮಕ್ಕೆ ಅನುವು ಮಾಡಿಕೊಟ್ಟಿದ್ದೇವೆ.

3. ಸಣ್ಣ ಕೈಗಾರಿಕೋಧ್ಯಮಕ್ಕೆ ಪಾಲಿಸುವ ಕೈಗಾರಿಕ ಕಾರ್ಯನೀತಿಗಳೇನು?

  • ಉ. ಕಂಪಿಸುತ್ತಿದ್ದ ೮೦ರ ಆರ್ಥಿಕ ವ್ಯವಸ್ಥೆಯಲ್ಲಿ, ಸಣ್ಣ ಕೈಗಾರಿಕೋಧ್ಯಮವು ಆರ್ಥಿಕವಾಗಿ, ಉತ್ಪನ್ನ ಸಾಮರ್ಥ್ಯದಲ್ಲಿ, ನೇಮಕಾತಿಯಲ್ಲಿ ಹಾಗು ರಫ್ತು ಮಾಡುವಲ್ಲಿ ಕೈಗಾರಿಕೋಧ್ಯಮವು ಪೂರ್ಣವಾಗಿ ತೊಡಗಿಸಿಕೊಂಡು ಬೆಳೆಸುತ್ತಾ ಸಾಗಬೇಕು.ಸರ್ಕಾರವು ಮೊಟ್ಟ ಮೊದಲ ಬಾರಿಗೆ ಸಣ್ಣ ಕೈಗಾರಿಕೋಧ್ಯಮಕ್ಕಾಗಿಯೇ ಒಂದು ಕಾರ್ಯನೀತಿ ರೂಪಿಸಿತು. ಕೈಗಾರಿಕಾವಾಗಿ ಹಿಂದುಳಿದ ಜಿಲ್ಲೆಗಳಲ್ಲಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೈಗಾರಿಕೋಧ್ಯಮಗಳನ್ನು ಗುರುತಿಸಿ, ಅದನ್ನು ತನ್ನ ಒಳ ವ್ಯವಹಾರದಲ್ಲಿ ಹಾಗು ಸಾಲಭಾದೆಯಿಂದ ಸ್ವತಂತ್ರಗೊಳಿಸಲಾಯಿತು. ಸಣ್ಣ ಕೈಗಾರಿಕೋಧ್ಯಮ ಅತಿವೇಗವಾಗಿ ಉನ್ನತಿ ಪಡೆಯಲು, ಸಣ್ಣ ಕೈಗಾರಿಕಾ ಬಂಡವಾಳವನ್ನು ೫ಲಕ್ಷ ರುಪಾಯಿಗೆ ಹೆಚ್ಚಿಸಲಾಯಿತು. ಸೇವೆ ಹಾಗು ವ್ಯವಹಾರಿಕವಾಗಿ ಎಲ್ಲ ಸಣ್ಣ ಕಯಗಾರಿಕೋಧ್ಯಮಗಳಿಗೂ ಇದು ಅನ್ವಯವಾಗುತ್ತದೆ ಹಾಗು ಆ ಕೈಗಾರಿಕೋಧ್ಯಮ ಇರುವ ಸ್ಥಳ ಅಥವ ಇನ್ನಿತರ ಯಾವುದನ್ನು ಈ ವಿಷಯದಲ್ಲಿ ಪರಿಗಣಿಸದೆ ಎಲ್ಲಾ ಉಧ್ಯಮಕ್ಕು ಅನ್ವಯವಾಗುತ್ತದೆ.

4. ಸಣ್ಣ ಘಟಕಗಳೆಂದು ಯಾವ ಮಾಪನಗಳ ಮೇಲೆ ಗುರುತಿಸಲಾಗುತ್ತೆ?

  • ಸಣ್ಣ ಘಟಕಗಳ ಮಾಪನ: ನಡೆಸುತ್ತಿರುವ ಉಧ್ಯಮದ ಮೇಲೆ ಹೂಡಿರುವ ಬಂಡವಾಳದ ಮೇಲೆ, ಸಣ್ಣ ಕಯಗಾರಿಕೋಧ್ಯಮ, ಅಧೀನದಲ್ಲಿರುವ ಕೈಗಾರಿಕಾ ಘಟಕ, ಚಿಕ್ಕ ಘಟಕ, ಸೇವ ಘಟಕಗಳೆಂದು ವಿಂಗಡಿಸಲಾಗುವುದು.
  • ಸಣ್ಣ ಕೈಗಾರಿಕಾ ಘಟಕ: ಸಣ್ಣ ಕೈಗಾರಿಕೋಧ್ಯಮ ಘಟಕ, ಎಂದು ಗುರುತಿಸಿಕೊಳ್ಳಲು, ಮಾಲಿಕತ್ವ ಅತವ ಸಾಲ ಅಥವ ಲೀಸ್ ಪಡೆದಿದ್ದರೂ ಸರಿ, ಅರವತ್ತು ಲಕ್ಷರುಪಾಯಿ ಬಂಡವಾಳವನ್ನು ಮೀರಬಾರದು. ಸಣ್ಣ ಕೈಗಾರಿಕೋಧ್ಯಮ ರಫ್ತು ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸುವಂತೆ ಉತ್ತೇಜನ ನೀಡಲು, ಯಾವುದೇ ಸಣ್ಣ ಕೈಗಾರಿಕೊಧ್ಯಮವು ಸ್ಥಾಪನೆ ಗೊಂಡ ಮೂರು ವರ್ಷಗಳಲ್ಲಿ ತಾನು ಉತ್ಪನ್ನಗಳಲ್ಲಿ ಶೇ.೩೦ರಷ್ಟು ವಿದೇಶಕ್ಕೆ ರಪ್ತು ಮಾಡಿದ್ದಲ್ಲಿ, ಅಂತಹ ಉಧ್ಯಮಕ್ಕೆ ಏಳು ಲಕ್ಷ ಹೆಚ್ಚಿನ ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗುವುದು.
  • ಅಧೀನದಲ್ಲಿರುವ ಕೈಗಾರಿಕೋಧ್ಯಮಾ: ಅಧೀನದಲ್ಲಿರುವ ಕೈಗಾರಿಕೋಧ್ಯಮೆಂದು ಗುರುತಿಸಿಕೊಳ್ಳಲು, ಅದರ ಬಂಡವಾಳ ಮಾಲಿಕತ್ವ ಅಥವ ಸಾಲ ಅಥವ ಭೋಗ್ಯದ ಆಧಾರವಾಗಿರಲಿ, ಅದರ ಬಂಡವಾಳ ೭೫ ಲಕ್ಷ ಮೀರಿರಬಾರದು.
  • ಚಿಕ್ಕ ಕೈಗಾರಿಕೋಧ್ಯಮ: ೧೯೭೭ರ ಕ೧೯೭೭ರ ಕೈಗಾರಿಕೋಧ್ಯಮ ನೀತಿ ಸಂಹಿತೆಯಲ್ಲಿ, ಚಿಕ್ಕ ಕೈಗಾರಿಕೋಧ್ಯಮಗಳಿಗೆ ವಿಶೇಷ ಗಮನ ಹರಿಸಲಾಯಿತು. ಇದರ ಪ್ರಕಾರ, ಕೈಗಾರಿಕೋಪಕರಣಗಳ ಮೇಲೆ ರುಪಾಯಿ ಒಂದು ಲಕ್ಷದ ವರೆಗೆ ಬಂಡವಾಳ ಹೂಡಬಹುದು. ಆದರೆ ಇದು ಕಾರ್ಯ ನಿರ್ವಹಿಸುತ್ತಿರುವ ಪಟ್ಟಣದ ಜನಸಂಖ್ಯೆ ೫೦,೦೦೦ ಮೀರಿರಬಾರದು. ೧೯೯೦ರಲ್ಲಿ ಬಂಡವಾಳವನ್ನು ೫ಲಕ್ಷ ರುಪಾಯಿಗೆ ಹೆಚ್ಚಿಸಿದರೂ, ಜನಸಂಖ್ಯೆ ಮಾತ್ರ ಅಲ್ಲಿಗೆ ಇರಿಸಲಾಯಿತು. ೧೯೯೧ ರ ಕೈಗಾರಿಕಾ ನೀತಿಯಲ್ಲಿ, ಚಿಕ್ಕ ಕೈಗಾರಿಕೋಧ್ಯಮಕ್ಕೆ ಭೂಮಿ ಮಂಜೂರಾತಿವಿದ್ಯುತ್ ಅಳವಡಿಕೆ, ತಂತ್ರಜ್ಞ ಮೇಲ್ದರ್ಜೆ ಪಡೆಯಲು ಅರ್ಹಗೊಳಿಸಲಾಯಿತು. ಇದಲ್ಲದೆ, ಹಣಕಾಸು ನೆರವು ಸುಲಭವಾಗಿ ನೀಡಲು, ಸರ್ಕಾರಿ ಕ್ರಯದಲ್ಲಿ ಮೊದಲ ಆಧ್ಯತೆ ಮತ್ತು ಕಾರ್ಮಿಕ ಕಾನೂನಿನಡಿಯಲ್ಲಿ ಕೆಲವೊಂದು ವಿಶೇಷ ರಿಯಾಯಿತಿ ನೀಡಲಾಯಿತು.