ನಮ್ಮ ಇರುವಿಕೆ

ಪ್ರಧಾನ ಯೋಜನೆಗಳು

ಕೆ.ಎಸ್.ಎಸ್.ಐ.ಡಿ.ಸಿ. ಸಾರಥ್ಯದಲ್ಲಿ ಕೈಗೊಂಡಿರುವ ಪ್ರಧಾನ ಯೋಜನೆಗಳು:

  • ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಡಚ್ ಸರ್ಕಾರದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು.
  • ಗಾರ್ಮೆಂಟ್ ವಸ್ತ್ರ ಸಂಕೀರ್ಣವನ್ನು ರಾಜಾಜಿನಗರದ ಕೈಗಾರಿಕ ವಸಾಹತುವಿನಲ್ಲಿ ಸ್ಥಾಪಿಸಿದೆ.
  • ಬಹುಮಹಡಿ ಸಂಕೀರ್ಣಗಳನ್ನು ವಿದ್ಯುನ್ಮಾನ ನಗರ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುನ್ಮಾನ ಕೈಗಾರಿಕೋಧ್ಯಮಕ್ಕೆ ಮತ್ತು ಮಾಹಿತಿ ತಂತ್ರಜ್ಞಾನಕ್ಕಾಗಿ ನಿರ್ಮಿಸಲಾಗಿದೆ.
  • ಐ.ಎಸ್.ಐ ಸಂಕೀರ್ಣವನ್ನು ಸಣ್ಣ ಕೈಗಾರಿಕೋದ್ಯಮದ ಉತ್ಪನ್ನಗಳನ್ನು ಪ್ರಮಾಣಿಸುವ ಸಲುವಾಗಿ ನಿರ್ಮಿಸಲಾಗಿದೆ.
  • ಬಹುಮಹಡಿ ಸಂಕೀರ್ಣವನ್ನು ವಿದ್ಯುತ್ ದೀಪ ತಯಾರಿಕೆಗೆ, ವಿದ್ಯುನ್ಮಾನ ವಸ್ತು ತಯಾರಿಕೆಗೆ ಬೇಕಾಗಿರುವ ಅಗತ್ಯವಸ್ತು ಪೂರೈಸಲು, ಕೈಗಾರಿಕಾ ಪ್ರದೇಶದ ಪ್ರತಿ ಮೂರು ಹಂತಗಳಾಗಿ ನಿರ್ಮಿಸಲಾಗಿದೆ.
  • ಶಿವಮೊಗ್ಗ ಮತ್ತು ಗುಲ್ಬರ್ಗಾದಲ್ಲಿ ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲಾಗಿದೆ
  • ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕರ್ನಾಟಕದ ಐದು ಕಡೆಗಳಲ್ಲಿ ನಿರ್ಮಿಸಲಾಗಿದೆ.

ಸಹಭಾಗಿತ್ವದಲ್ಲಿ ಕೈಗೊಂಡಿರುವ ಯೋಜನೆಗಳು:

ನಿಗಮವು ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ ಬಯೊ ಟೆಕ್ ಪಾರ್ಕ್ ಹಾಗು ಮಾಹಿತಿ ತಂತ್ರಜ್ಞಾನವನ್ನು ೩೭ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಿಗಮವು ಒಡೆತನದಲ್ಲಿರುವ ಸುಮಾರು ೧.೬ ಎಕರೆ ಯನ್ನು ೩೦ವರ್ಷಗಳಿಗೆ ಗುತ್ತಿಗೆಗೆ ನೀಡಲಾಗಿದೆ.


ಮುಂದಿನ ಯೋಜನೆಗಳು:

  • ತಾಲೂಕು ಹಂತದಲ್ಲಿ ಹೊಸ ಕೈಗಾರಿಕೆ ಸ್ಥಿರಾಸ್ತಿಯನ್ನು ಪಕ್ವಗೊಳಿಸಲಾಗುವುದು.
  • ಕೈಗಾರಿಕೆ ವಿಷಯದಲ್ಲಿ ಹಿಂದುಳಿದಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
  • ಸೂಕ್ತ ಜಾಗಗಳಲ್ಲಿ ಪರಿಷ್ಕರಣ ಘಟಕಗಳನ್ನು ಸ್ಥಾಪಿಸುವುದು.
  • ಕಸರು ಮರು ಉಪಯೋಗ ವ್ಯವಸ್ಥೆಯನ್ನು ಮಾಡುವುದು.
  • ರಸ್ತೆ ಮತ್ತು ಒಳ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು.
  • ಕೈಗಾರಿಕಾ ಕಚ್ಛಾ ವಸ್ತುಗಳನ್ನು ಸಣ್ಣ ಕೈಗಾರಿಕೋಧ್ಯಮಗಳಿಗೆ ಹಂಚಲು ತಾಲೂಕು ಹಂತದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ.
  • ಹೊರ ರಫ್ತು ಘಟಕಗಳನ್ನು ನಿರ್ಮಿಸಿ, ನಿರ್ವಹಿಸುವುದು.
  • ಬಾಡಿಗೆ ಮೇಲೆ ಯಂತ್ರೋಪಕರಣಗಳ ಸಹಾಯವನ್ನು ಪಡೆಯುವುದು
  • ಉಪ ಯಂತ್ರೋಪಕರಣಗಳ ಶೇಖರಣ ಘಟಕ ಹಾಗು ಪರೀಕ್ಷ ಘಟಕವನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು.
  • ಪ್ರತಿ ಘಟಕಕ್ಕೂ ಐಎಸ್ಒ ೯೦೦೦/ಐಎಸ್ಒ ೧೪೦೦೧ ಪ್ರಮಾಣಪತ್ರವನ್ನು ಪ್ರತಿ ಉಪ ಘಟಕ ಪಡೆಯುವಂತೆ ನೋಡಿಕೊಳ್ಳುವುದು.