ಪ್ರಸ್ತಾವನೆ:
ಸ್ವತಂತ್ರನಂತರ ಸಣ್ಣ ಕೈಗಾರಿಕೋಧ್ಯಮದ ಬೆಳವಣಿಗೆ ನಮ್ಮ ದೇಶದ ರಚನಾಕ್ರಮವಾಗಿ ಬೆಳೆದ ಆರ್ಥಿಕ ಅಭಿವೃದ್ಧಿಗೆ ಹಿಡಿದ ಕನ್ನಡಿ. ಸ್ವತಂತ್ರ ಪೂರ್ವದಲ್ಲಿ 'ಸಣ್ಣ ಕೈಗಾರಿಕೋಧ್ಯಮ' ಎಂಬ ಮಾತೇ ವಾಡಿಕೆಯಲ್ಲಿರಲಿಲ್ಲ. ಹಳ್ಳಿ ಪ್ರದೇಶದ ಹಾಗು ಸಣ್ಣ ಮನೆಯಲ್ಲಿ ಸಾಗುತ್ತಿದ್ದ ಉಧ್ಯಮವೇ ಕ್ಷೇತ್ರವಾಗಿ ನಮ್ಮ ದೇಶದ ಉದ್ದಗಲಕ್ಕೂ ವ್ಯಾಪಿಸಿತ್ತು. ಈ ಉಧ್ಯಮವನ್ನು ಉಳಿಸಿ, ನವೀನಗೊಳಿಸಿ ಮತ್ತು ಇನ್ನೂ ಹೆಚ್ಚಿನ ಬೆಳವಣಿಗೆಗೆ ಸ್ವತಂತ್ರ ಸಿಗುತ್ತಿದ್ದಂತೆ ಒತ್ತುಕೊಡಲಾಯಿತು ಮತ್ತು ಆಧುನಿಕ ಸಣ್ಣ ಕೈಗಾರಿಕೋಧ್ಯಮ ಈ ಕಾರ್ಯಕ್ರಮದ ಅಡಿಯಲ್ಲಿ ಹುಟ್ಟಿಕೊಂಡಿತು. ಈ ಸಣ್ಣ ಕೈಗಾರಿಕೋಧ್ಯಮವು ಮಧ್ಯಮ ವರ್ಗದ ವಿದ್ಯಾವಂತರಿಗೆ ಹಾಗು ಅನುಭವಸ್ಥ ತಂತ್ರಜ್ಞರಿಗೆ ಸ್ವ-ಉದ್ಯೋಗ ದೊರಕಿಸಿಕೊಟ್ಟಿತಲ್ಲದೆ, ಇದು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುವ ಉಧ್ಯಮವಾಗಿ ಮಾರ್ಪಟ್ಟಿತು. ಇಂದು ಈ ಸಣ್ಣ ಕೈಗಾರಿಕೋಧ್ಯಮ ನಮ್ಮ ಸಮಾಜದ ಆರ್ಥಿಕ ವ್ಯವಸ್ಥೆ ಸಮತೋಲನತೆಯಿಂದ ಬಾಳಲು ಒಂದು ಶಕ್ತಿಶಾಲಿ ಉಪಕರಣವಾಗಿದೆ. ಈ ಸಾಧನೆಗೆ ಮೂಲ ಕಾರಣ ಉತ್ಸಾಹದ ಬಂಡವಾಳ ಹೂಡುವ ಮೂಲಕ ಪ್ರೇರಕ ಶಕ್ತಿ ಯಾದ ಈ ಸಣ್ಣ ಕೈಗಾರಿಕೋಧ್ಯಮಿಗಳು. ಈ ಸಣ್ಣ ಕೈಗಾರಿಕೋಧ್ಯಮಕ್ಕೆ ಸಹಾಯವಾಗಲೆಂದು ಒಂದು ಆಶಾದಾಯಕ ಕಾರ್ಯಕ್ರಮವನ್ನು ೧೯೫೪ರ ಕೊನೆಯಲ್ಲಿ ಅನುಷ್ಠಾನಕ್ಕೆ ತರಲಾಯಿತು. ಭಾರತ ಸರ್ಕಾರದ ಕೋರಿಕೆಯಂತೆ ಫೋರ್ಡ್ ಕಂಪನಿಯವರ ಸಹಯೋಗದಲ್ಲಿ ಒಂದು ಅಂತರಾಷ್ಟ್ರೀಯ ತಂಡದ ಸಲಹೆಗಳ ಮೇಲೆ ಈ ಕಾರ್ಯಕ್ರಮ ರಚಿಸಲಾಯಿತು. ಮುಂದಿನ ಭಾಗವಾಗಿ ಕೇಂದ್ರ ಸಣ್ಣ ಕೈಗಾರಿಕಾ ಸಲಹಾ ಮಂಡಳಿಯ ಸೂಚನೆಯ ಮೇರೆಗೆ ರಾಜ್ಯ ಮಟ್ಟದ ಸಂಘಟನೆಗಳು ಸಣ್ಣ ಕೈಗಾರಿಕೋಧ್ಯಮಕ್ಕೆ ಅವಶ್ಯವಿರುವ ವಿರಳವಾಗಿರೊ ಕಚ್ಚಾ ವಸ್ತುಗಳು ಹಾಗು ಉಧ್ಯಮಕ್ಕೆ ಅಗತ್ಯವಿರೊ ಸ್ಥಿರಾಸ್ತಿ ಒದಗಿಸಲು ಅನುವಾಗುವಂತೆ ಎಲ್ಲಾ ರಾಜ್ಯಗಳಲ್ಲೂ ಸ್ಥಾಪಿಸಲಾಯಿತು. ಈ ನಡುವೆ ಒಂದು ಶಕ್ತಿಶಾಲಿಯಾದ ಮಂಡಳಿ ರಚಿಸಿ, ಸಣ್ಣ ಕೈಗಾರಿಕೋಧ್ಯಮದ ವೇಗ ಗತಿಯಲ್ಲಿ ಅಭಿವೃದ್ಧಿಮಾಡಲು ಸರ್ಕಾರದ ಕಾಲ ಕಾಲಕ್ಕೆ ಮಂಡಿಸುತ್ತಿದ್ದ ಮಾರ್ಗದರ್ಶಿಗಳ ಹೊರತಾಗಿ, ಯಾರ ಹಸ್ತಾಕ್ಷೇಪವಿಲ್ಲದೆ ನಿರ್ಧಾರ ತೆಗೆದುಕೊಳ್ಳುವಷ್ಟು ಸ್ವತಂತ್ರಗೊಳಿಸಲಾಯಿತು.
ವಿಷಯ : ಸರ್ಕಾರ ಹೊಂದಿರುವ ಕೈಗಾರಿಕ ಪ್ರದೇಶಗಳು ಕಾರ್ಯ ಮತ್ತು ನಿರ್ವಾಹಣೆ ಸರ್ಕಾರಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕ ವಿಭಾಗ. ಸರ್ಕಾರಿ ಆದೇಶ ಸಂ.ಸಿಐ೧೯೯ ಆರ್ಎಸ್ಎಸ್೬೦,ಬೆಂಗಳೂರು, ಡಿಟಿ೨೮-೦೯-೧೯೬೧ಓದಿಗೆ ಸಂಬಂಧಿಸಿದ್ದು:
ಅನುರೂಪತೆ ಡಿ.ಒ. ಪತ್ರ ಸಂ. ಎಡಿಎಮ್ಎ.೨೧/೬೦-೬೧ ದಿನಾಂಕ ೯ ಜೂನ್ ೧೯೬೧ ಆಧಾರವಾಗಿ ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಸಣ್ಣ ಕೈಗಾರಿಕಾ ನಿಗಮ ನಿಯಮಿತ, ಬೆಂಗಳೂರು ೧. ಅನುರೂಪತೆಯು ಕೊನೆಗೊಳ್ಳುವುದು ಪತ್ರ ಸಂ.ಎಸ್ಹೆಚ್ಪಿ ೫೧೯೩/೬೧-೭೨ ದಿನಾಂಕ ೨೨ ಆಗಸ್ಟ್ ೧೯೬೧ ಜಂಟಿ ನಿರ್ದೇಶಕರು, ಸಣ್ಣ ಪ್ರಮಾಣ ಕೈಗಾರಿಕೋಧ್ಯಮ, ಬೆಂಗಳೂರು.
ಪೀಠಿಕೆ:
ಸರ್ಕಾರ ಆದೇಶ ಸಂ.ಸಿಐ:೯೧:ಆರ್ಎಸ್ಎಸ್:೬೧, ದಿನಾಂಕ ೧೮/೨೦ ಮೇ ೧೯೬೧, , ಈ ಮೂಲಕ, ಕೈಗಾರಿಕಾ ಪ್ರದೇಶಗಳ ಎಲ್ಲಾ ಕಟ್ಟಡ ನಿರ್ಮಾಣಗಳನ್ನು ಮೈಸೂರು ಸಣ್ಣ ಕೈಗಾರಿಕೋಧ್ಯಮ ನಿಗಮಕ್ಕೆ ಒಳಪಡುತ್ತದೆ.
ಆದೇಶ:
ಈ ಮೂಲಕ, ಮೈಸೂರು ಕೈಗಾರಿಕೋಧ್ಯಮ ನಿಗಮ ನಿಯಮಿತವನ್ನು ಮೈಸೂರು ಸರ್ಕಾರದ ಮಧ್ಯವತಿಯಾಗಿ ಎಲ್ಲಾ ಕೈಗಾರಿಕ ಪ್ರದೇಶ, ಅದರ ನಿರ್ವಹಣೆ ಮತ್ತು ಬಾಡಿಗೆ ಪಡೆಯಲು ನೇಮಿಸಲಾಗಿದೆ. ಮೈಸೂರು ಸಣ್ಣ ಕೈಗಾರಿಕಾ ನಿಗಮವು ಸ್ಥಾಪನ ಶುಲ್ಕವಾಗಿ ಈಗಾಗಲೇ ಭರಿಸಲು ಹೊರಡಿಸಿರುವ ಆದೇಶ ಮತ್ತು ಶೇ.೧ರಷ್ಟು ಬಂಡವಾಳವನ್ನು ಕಟ್ಟಡ ನಿರ್ವಹಣೆಗೆ ಉಪಯೋಗಿಸಲಾಗುವುದು.
ಮೈಸೂರು ರಾಜ್ಯ ರಾಜ್ಯಪಾಲರ ಹೆಸರಲ್ಲಿ ಆದೇಶದ ಮೇರೆಗೆ,
ಸಹಿ/-
ಸಕಾರಿ ಕಾರ್ಯದರ್ಶಿ ಸುಪರ್ಧಿಯಲ್ಲಿ,
ವಾಣಿಜ್ಯ ಮತ್ತು ಕೈಗಾರಿಕ ವಿಭಾಗ