ಕರ್ನಾಟಕದ ಕುರಿತು

ಕರ್ನಾಟಕದ ಕುರಿತು

ಕರ್ನಾಟಕ ರಾಜ್ಯವು ಎತ್ತರದ ಭೂಭಾಗದಿಂದ ಕೂಡಿರುವ ದಕ್ಷಿಣ ಭಾರತದ ಭಾಗವಾಗಿದೆ. ಕರ್ನಾಟಕದ ಆರ್ಥಿಕವಾಗಿ ಬೆಳೆಸುವ ಕಾರ್ಯವು ಸರ್ ಎಮ್.ವಿಶ್ವೇಶ್ವರಯ್ಯರವರು ಹಿಂದಿನ ಮೈಸೂರು ಪ್ರಾಂತ್ಯದ(ಈಗಿನ ಕರ್ನಾಟಕ) ದಿವಾನರಾಗಿ ನೇಮಕಗೊಂಡಾಗಲೆ ಶುರುವಾಯಿತು.

ನವೆಂಬರ್ ೧, ೧೯೭೩ರಂದು ಈ ರಾಜ್ಯವನ್ನು "ಕರ್ನಾಟಕವೆಂದು" ನಾಮಕರಿಸಿ ಘೋಷಿಸಲಾಯಿತು. ಬೆಂಗಳೂರು ಈ ರಾಜ್ಯದ ರಾಜಧಾನಿಯಾಗಿದೆ.

ವಿಸ್ತೀರಣ:

೧,೯೨,೦೦೦ ಚ.ಕಿ.ಮಿ(ಭಾರತದ ಎಂಟನೇ ಅತಿದೊಡ್ಡ ರಾಜ್ಯ)

ಹಸಿರು ಪ್ರದೇಶ:

ಹೆಚ್ಚು ಉಷ್ಣಾಂಶ ಉಳ್ಳ ಎವರ್‌ಗ್ರೀನ್ ಕಾಡು, ಅರೆ ಹಸಿರು ಹೊದ್ದ ಕಾಡು ಮಲೆನಾಡಿನ ಒಣಹವೆ ಪ್ರದೇಶ, ಒಣಹವೆ ಪ್ರದೇಶ(ಬಯಲು ಸೀಮೆ), ಕುರುಚಲು ಗಿಡಗಳ ಪ್ರದೇಶ

ವಿಸ್ತೀರಣ::

೭೬೦ ಕಿ.ಮಿ.(ಉತ್ತರ-ದಕ್ಷಿಣ)

ಪ್ರಮುಖ ಕೈಗಾರಿಕೋಧ್ಯಮ:

ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್, ಇಂಜಿನಿಯರಿಂಗ್, ಎರೋನಾಟಿಕ್ಸ್, ಯಂತ್ರೋಪಕರಣ, ಗಡಿಯಾರ ತಯಾರಿಕೆ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಅಲ್ಯುಮಿನಿಯಮ್, ಉಕ್ಕು.

ಅಗಲ:

420 ಕಿಮೀ ( ಪೂರ್ವ-ಪಶ್ಚಿಮ)

ಪ್ರಮುಖ ಬೆಳೆ:

ರಾಗಿ, ಜೊಳ, ಅಕ್ಕಿ, ಕಬ್ಬು, ತೆಂಗು, ಕಡಲೆ, ಕಾಫಿ, ಹತ್ತಿ, ಮುಂತಾದವುಗಳು.

ಜನಸಂಖ್ಯೆ::

ಒಟ್ಟು ೫ಕೋಟಿ,೭೦ಲಕ್ಷ
ನಗರವಾಸಿಗಳು ಶೇ.೩೨.೯೮ ಹಳಿವಾಸಿಗಳು ಶೇ.೬೬.೦೧
ಆರ್ಥಿಕ ಬೆಳವಣಿಗೆ ಶೇ.೬.೨
ಕೈಗಾರಿಕೋಧ್ಯಮ ಬೆಳವಣಿಗೆ ಶೇ.೭.೭
ವಿಮಾನ ನಿಲ್ದಾಣ ೬ ಮತ್ತು ಹಡಗು ನಿಲ್ದಾಣ ೩

ಪ್ರಮುಖ ಖನಿಜಗಳು:

ಬಂಗಾರ( ಭಾರತದ ಉತ್ಪಾದನೆ 90%),
ಕಬ್ಬಿಣದ ಅದಿರು, ಮ್ಯಾಂಗನೀಸ್, Magnasite ಇತ್ಯಾದಿ,

ಹವಾಗುಣ:

ಅರೆ ಉಷ್ಣ ಪ್ರದೇಶ

 

ಪ್ರಮುಖ ಶೈಕ್ಷಣಿಕ ಸಂಸ್ಥೆಗಳು:

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ರಾಮನ್ ರಿಸರ್ಚ್ ಸೆಂಟರ್, ನಿಮ್ಹಾನ್ಸ್, ಇಸ್ರೋ, ಹೆಚ್.ಎ.ಎಲ್

ಪ್ರಮುಖ ಋತುಗಳು:

ಬೇಸಿಗೆ: ಮಾರ್ಚಿ ಇಂದ ಮೇ(೧೮ ರಿಂದ ೪೦ ಡಿಗ್ರಿ ಉಷ್ಣಾಂಶ)
ಮಳೆಗಾಲ: ಜೂನ್ ರಿಂದ ಅಕ್ಟೋಬರ್
ಚಳಿಗಾಲ: ನವೆಂಬರ್ ನಿಂದ ಫೆಬ್ರವರಿ (೧೪ ರಿಂದ ೩೨ ಡಿಗ್ರಿ ಉಷ್ಣಾಂಶ)
ದ-ಪ ಮಾನ್ಸೂನ್: ಜೂನ್ ರಿಂದ ಆಗಸ್ಟ್
ಉ-ಪೂ ಮಾನ್ಸೂನ್: ಆಗುಂಬೆಯಲ್ಲಿ ೫೦೦ ರಿಂದ ೪೦೦೦ ಮಿ.ಮಿ. ಮಳೆಯಾಗುತ್ತೆ

ಪ್ರಮುಖ ನಗರ/ಪಟ್ಟಣಗಳು:

ಬೆಂಗಳೂರು, ಹುಬ್ಬಳ್ಳಿ, ದಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಮೈಸೂರು, ಮಂಡ್ಯ, ಮಂಗಳೂರು, ಮುಂತಾದವುಗಳು.

ನದಿಗಳು:

ಕೃಷ್ಣ ನದಿ ವ್ಯಾಪ್ತಿಗಳು:
ಕೃಷ್ಣ, ತುಂಗಭದ್ರ, ವೇದಾವತಿ, ಹಗರಿ, ಮಲಪ್ರಭ, ಘಟಪ್ರಭ,
ಮಲಪ್ರಭಾ , ಘಟಪ್ರಭಾ , ಭೀಮಾ ಇತ್ಯಾದಿ
ಕಾವೇರಿ ನದಿ ವ್ಯಾಪ್ತಿಗಳು:
ಕಾವೇರಿ, ಕಬಿನಿ, ಹೇಮಾವತಿ, ಹಾರಂಗಿ, ಶಿಂಶ

ಧರ್ಮಗಳು:

ಹಿಂದುಗಳು, ಜೈನರು, ಮುಸಲ್ಮಾನರು, ಕ್ರಿಶ್ಚಿಯನ್ನರು, ಮುಂತಾದವುಗಳು

ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ

ರಸ್ತೆಗಳು:

ಒಟ್ಟು ರಸ್ತೆಗಳ ಉದ್ದ ೧,೨೨,೪೮೯ಕಿ.ಮಿ.
ರಾಷ್ಟ್ರೀಯ ಹೆದ್ದಾರಿ: ೨,೩೫೭ ಕಿ.ಮಿ.


ಉದ್ದಿಮೆಗಳ ಚಿತ್ರಣ:

 

ಕರ್ನಾಟಕ ಹಿಂದಿನಿಂದಲೂ ಉದ್ದಿಮೆಗಳ ಬೆಳವಣಿಗೆಗೆ ಅಗತ್ಯವಾದುದನ್ನು ಒದಗಿಸುವಲ್ಲಿ ಮುಂಚುಣಿಯಲ್ಲಿದೆ. ಅದರ ಸ್ವಾಭಾವಿಕ ಶಕ್ತಿ ಹಾಗು ಜನರ ಸಾಹಸ ಪ್ರವೃತ್ತಿ ಕರ್ನಾಟಕವನ್ನು ಬಂಡವಾಳ ಹೂಡಲು ಒಂದು ಪ್ರಮುಖ ತಾಣವಾಗಿ ಮಾರ್ಪಟ್ಟಿದೆ.

  • ಅಧ್ಭುತ ಮಾನವ ಸಂಪನ್ಮೂಲದ ಜೊತೆಗೆ ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಹಾಗು ಸಾಮಾನ್ಯ ವಿಜ್ಞಾನದಲ್ಲಿ ತರಬೇತಿ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯರಿರುವುದು ವಿಶೇಷ.
  • ಅತ್ಯುನ್ನತ್ತ ಸಂಶೋಧನ ಹಾಗು ಅಭಿವೃದ್ಧಿಪೂರಕ ವಾತಾವರಣ ಹೊಂದಿರುವ ಕೇಂದ್ರ ಸರ್ಕಾರದ ಪ್ರಯೋಗಾಲಯಗಳು ಹಾಗು ಸಂಶೋಧನ ಕೇಂದ್ರಗಳು ರಾಜ್ಯದಲ್ಲಿ ಸ್ಥಾಪಿತಗೊಂಡಿದೆ.
  • ಪೂರಕ ಹವಾಗುಣ ಹಾಗು ವಾಸಸ್ಥಳ.
  • ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ದೊಡ್ಡ ವ್ಯಪ್ತಿಯಲ್ಲಿ ಸುಗಮ ಸಾಧ್ಯತೆಗಳು, ವಿಮಾನ ನಿಲ್ದಾಣಗಳು ಹಾಗು ಹಡಗು ನಿಲ್ದಾಣಗಳು.
  • ಪುಷ್ಟಿಕಾರಕವಾದ ಉದ್ದಿಮೆ ಸಂಬಂಧ.

ಒಳವಿನ್ಯಾಸ:

 

ರಾಜ್ಯ ಸರ್ಕಾರ ಅನೇಕ ಸಂಘ ಸಂಸ್ಥೆಗಳನ್ನು ಉದ್ದಿಮೆ ಬೆಳವಣಿಗೆಗೆ ಪೂರಕವಾಗುವಂತೆ ಸ್ಥಾಪಿಸಿದೆ.

  • ಆರ್ಥಿಕ ನೆರವಿನ ಜೊತೆಗೆ ವಿದ್ಯುತ್, ಭೂಮಿ ಹಾಗು ನೀರನ್ನು ಅಗಾದವಾಗಿ ಒದಗಿಸುತ್ತದೆ.
  • ಕರ್ನಾಟಕ ಉದ್ದಿಮೆ ಭೂ ಅಭಿವೃದ್ಧಿ ಮಂಡಳಿ ಉದ್ಯಮಕ್ಕೆ ಒದಗಿಸಿವ ಜಾಗವನ್ನು ಹೊಂದಿರುತ್ತೆ.
  • ಕರ್ನಾಟಕ ಸ್ಟೇಟ್ ಫೈನಾನ್ಷಿಯಲ್ ಕಾರ್ಪೊರೇಷನ್ ಉದ್ದಿಮೆ ಶುರುಮಾಡಲು ಸಾಲ ನೀಡುತ್ತೆ.
  • ಕರ್ನಾಟಕ ಸಣ್ಣ ಕೈಗಾರಿಕೋಧ್ಯಮ ಅಭಿವೃದ್ಧಿ ಸಂಸ್ಥೆ ಕೈಗಾರಿಕೋಧ್ಯಮಗಳಿಗೆ ಶೆಡ್ , ಒಳಾಂಗಣ ಬೇಡಿಕೆ ಹಾಗು ಕಚ್ಚಾವಸ್ತುಗಳನ್ನು ಸಹ ಪುರೈಸುತ್ತದೆ.

  ಮಾಹಿತಿ ತಂತ್ರಜ್ಞಾನ:

 
  •   ಮಾಹಿತಿ ತಂತ್ರಜ್ಞಾನದ ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಬಣ್ಣಿಸಲಾಗುತ್ತೆ.