ನಮ್ಮ ಬಗ್ಗೆ

ಭೂಮಿ ಸ್ವಾಧೀನಪಡಿಸಿಕೊಳ್ಳುವುದು:

ಸಮಾರು ೪೦ ಎಕರೆ ಭೂಮಿಯನ್ನು ಬೆಂಗಳೂರು ಹೊರವಲಯದಲ್ಲಿ ಸರ್ಕಾರಕ್ಕೆ ವಿಲೀನಗೊಳಿಸಿಸಲು ಪೀಣ್ಯ ಮೂರನೆ ಹಂತದ ಹತ್ತಿರ ಕನಬೊಬ್ಬನಹಳ್ಳಿಯಲ್ಲಿ ಗುರುತಿಸಲಾಗಿಯಿದಲ್ಲದೆ ೮ ಎಕರೆ ಸರ್ಕಾರಿ ಜಮೀನನ್ನು ಆನೇಕಲ್ ತಾಲೂಕು, ಅತ್ತಿಬೆಲೆ ಹೋಬಳಿಯ ರಾಮಸಾಗರ ಹಳ್ಳಿಯಲ್ಲಿ ನೀಡಲಾಗಿದೆ. ಬಯೊ ಟೆಕ್ ಪಾರ್ಕ್ ಮತ್ತು ಬಿಪಿಓ ಗಳಿಗೆ ಜಾಗ ಹೊಂದಿಸಲು ಬೆಂಗಳೂರು ಹೊರವಲಯದಲ್ಲಿ ಗುರುತಿಸಲಾಗಿದೆ.

ನಿಗಮವು ಕರ್ನಾಟಕ ಸರ್ಕಾರವನ್ನು ಕೆಲವು ತೆರಿಗೆ ವಿನಾಯಿತಿ ನೀಡುವಂತೆ ಕೆ.ಐ.ಎ.ಡಿ.ಬಿ. ಗೆ ತಿಳಿಸುವಂತೆ ಕೋರಲಾಗಿದೆ. ಇದು ಸಾರ್ಕಾರಿ ಕೈಗಾರಿಕ ರಾಜನೀತಿಯಲ್ಲಿ ಹೊರಡಿಸಲಾಗುತ್ತದೆ.

ಕಚ್ಚಾವಸ್ತುಗಳನ್ನು ಪಡೆಯುವ ಮತ್ತು ಹಂಚಿಕೆ::

ನಿಗಮವು ವಿವಿದೆಡೆ ೨೭ ಕಚ್ಚಾ ವಸ್ತುಗಳ ಶೇಖರಣ ಘಟಕವನ್ನು ರಾಜ್ಯದ ಉದ್ದಗಲಕ್ಕೂ ಸ್ಥಾಪಿಸಿ, ಸಣ್ಣ ಕೈಗಾರಿಕೋಧ್ಯಮದ ಬೇಡಿಕೆಗಳನ್ನು ಪೂರೈಸುತ್ತಿದೆ. ಕೈಗಾರಿಕೋಧ್ಯಮದ ಅಗತ್ಯ ವಸ್ತುಗಳಾದ ಕಬ್ಬಿಣ, ಲೋಹ, ಪ್ಯಾರಾಫಿನ್ ವ್ಯಾಕ್ಸ್, ಕಲ್ಲಿದ್ದಲು ಮತ್ತು ಅರೆಗಾವು ಕಲ್ಲಿದ್ದಲು, ಉತ್ಪನ್ನಗಳನ್ನು ನಿಗಮವು ನಿರ್ವಹಿಸುತ್ತಿದೆ. ಎಸ್.ಎ.ಐ.ಎಲ್., ಟಿಸ್ಕೊ. ಐಐಎಸ್ಕೊ, ವಿಎಸ್ಪಿ, ಐಒಸಿ ಮತ್ತು ಕೋಲ್ ಇಂಡಿಯ ದಿಂದ ಪಾಡೆಯಲಾಗುತ್ತದೆ.

ನಿಗಮವು ಸರ್ಕಾರಿ ಶಾಖೆಗಳಿಗೆ ಕಚ್ಚಾವಸ್ತುಗಳನ್ನು ಹಂಚಿಕೆ ಮಾಡುತ್ತಿದೆ. ಕಂಪನಿಯು ಒಂದು ಗೊಡೌನ್ ಕೇಂದ್ರ ಸ್ಥಾಪಿಸಿದ್ದು, ಇದಕ್ಕೆ ರೈಲು ಸೈಡಿಂಗ್ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನ ಚೆನ್ನಸಂದ್ರದಲ್ಲಿ ಸುಮಾರು ೧೦೦ ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಚೆನ್ನಸಂದ್ರ ಉಗ್ರಾಣದಲ್ಲ್ಲಿ ಒಂದು ಲಕ್ಷ ಮೀಟರ್ ಕಬ್ಬಿಣವನ್ನು ಇರಿಸಬಹುದಾಗಿದೆ.

ಸಣ್ಣ ಕೈಗಾರಿಕೋಧ್ಯಮಕ್ಕೆ ಮಾರುಕಟ್ಟೆ ಒದಗಿಸುವುದು:

ನಿಗಮವು ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸಣ್ಣ ಕೈಗಾರಿಕೆ ಉತ್ಪನ್ನಗಳಿಗಾಗಿಯೇ ಕೆಎಸ್ಐಎಮ್ಸಿ ಸಂಸ್ಥೆಯನ್ನು ೩೫ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಯಿತು. ಇಲ್ಲಿಯತನಕ, ಸಣ್ಣ ಕೈಗಾರಿಕೋಧ್ಯಮ ತನ್ನ ಉತ್ಪನ್ನ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸನ್ಣ ಕೈಗಾರಿಕೋಧ್ಯಮ ಮಾರುಕಟ್ಟೆ ಉತ್ತೇಜಿಸಲು, ಸಕಾರಿ ಹಾಗು ಸರ್ಕಾರಿ ಸ್ವಾಮ್ಯದಲ್ಲಿ ಎಲ್ಲಾ ಕಾರ್ಯಗಳನ್ನು ಸಣ್ಣ ಕೈಗಾರಿಕೋಧ್ಯಮದ ಪರವಾಗಿ ನಡೆಸಿಕೊಡುತ್ತಿದೆ.

ಯಂತ್ರೋಪಕರಣವನ್ನು ಸಾಲದ ಅಡಿಯಲ್ಲಿ ಒದಗಿಸುವುದು:

ಸಣ್ಣ ಕೈಗಾರಿಕೋಧ್ಯಮವನ್ನು ಗುರುತಿಸಲು, ನಿಗಮವು ಸಣ್ನ ಕೈಗಾರಿಕೋಪಕರಣಗಳನ್ನು ಸಾಲದ ಅಡಿಯಲ್ಲಿ ೧೯೮೦ ರವರೆಗೆ ನೀಡಲಾಗುತ್ತಿತ್ತು. ಸರ್ಕಾರದ ವತಿಯಿಂದ ಬಿಡುಗಡೆಯಾದ ಹಣ ಅತ್ಯಲ್ಪವಾಗಿತ್ತಾದ್ದರಿಂದ ಯೊಜನೆಯು ಕುಂಟುತ್ತ ಸಾಗಿತ್ತು ಹಾಗು ಆ ಯೋಜನೆಯನ್ನು ನವೀಕರಿಸುವ ಕುರಿತು ಯೋಚಿಸಲಾಗುತ್ತಿದೆ.

ಪ್ರದರ್ಶನಗಳಲ್ಲಿ ಭಾಗವಹಿಸುವುದು:

ನಿಗಮವು ೧೯೮೦ರವರೆಗೆ, ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸಿ ಮಾಹಿತಿ ಕಲೆ ಹಾಕುವುದು ಮತ್ತು ಅಲ್ಲಿ ಸಣ್ಣ ಕೈಗಾರಿಕ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಭಾಗವಹಿಸಲಾಗುತ್ತಿತು. ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸುವುದರೊಮದಿಗೆ, ಸಣ್ಣ ಕೈಗಾರಿಕೋಧ್ಯಮ ಉತ್ಪನ್ನಗಳಿಗೆ ಬೇಕಾದ ಮಾರುಕಟ್ಟೆಯನ್ನು ಸೃಷ್ಠಿಸಲಾಗಿದೆ. ಈ ವಿಭಾಗದಲ್ಲಿ ಪ್ರಾವಿಣ್ಯ ಹೊಂದುತ್ತ, ಕಂಪನಿಯು ರಫ್ತು ಕಂಪನಿಗಳಿಗೆ ಇನ್ನೂ ಹೆಚ್ಚು ಮಾರುಕಟ್ಟೆ ಒದಗಿಸುತ್ತದೆ.

ಇನ್ನಿತರ ಚಟುವಟಿಕೆ:

ಪೀಣ್ಯದಲ್ಲಿ ಸ್ಥಾಪಿಸಲಾದ ಭಾರತೀಯ ಐಎಸೈಯನ್ನು ಪೀಣ್ಯಾ ಕೈಗಾರಿಕೋಧ್ಯಮ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಪ್ರಯೋಗಾಲಯವು, ಆಧುನಿಕ ಪರೀಕ್ಷಾ ಉಪಕರಣಗಳನ್ನು ಹೊಂದಿದ್ದು, ರಾಸಾಯನಿಕ, ಎಲೆಕ್ಟ್ರಿಕಲ್,ಎಲೆಕ್ಟ್ರಾನಿಕ್ಸ್ ಮತ್ತು ಇನ್ನಿತರ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ. ಈ ಯೋಜನೆಗೆ ೧೦೦ ಲಕ್ಷ ತಗುಲಿದೆ. ಇದನ್ನು ಕರ್ನಾಟಕ ಸರ್ಕಾರ, ಕೆಎಸ್ಎಸ್ಐಡಿಸಿ, ಕೆಎಸ್ಎಫ್ಸಿ, ಕೆಎಸ್ಐಐಡಿಸಿ, ಎನ್ಜಿಇಎಫ್, ಎಮ್ಎಮ್ಎಲ್ ಮತ್ತು ಐಡಿಬಿಐ ಭರಿಸಿದೆ. ಮುಂದೆ, ನಿರ್ಧಿಷ್ಟ ಮಾನದಂಡದ ಕ್ರಯವನ್ನು ಕಡಿಮೆಗೊಳಿಸಲಾಗುವುದು. ಇದರ ಜೊತೆಗೆ, ರಾಷ್ಟ್ರೀಯ ವಿನ್ಯಾಸ ಸಮಸ್ಥೆರವರು ಕೆಎಸ್ಎಸ್ಐಡಿಸಿ ಯೊಂದಿಗೆ ಜೊತೆಗೂಡಲು ಮುಂದೆ ಬಂದಿದೆ. ಈ ಮುಲಕ, ರಾಷ್ಟ್ರಿಯ ವಿನ್ಯಾಸ ಸಂಸ್ತೆಯನ್ನು ರಾಜಾಜಿನಗರ ಕೈಗಾರಿಕ ಪ್ರದೇಶದಲ್ಲಿ ಸ್ಥಾಪಿಸಲಾಗುವುದು ಹಾಗು ಸಣ್ಣ ಕೈಗಾರಿಕೋಧ್ಯಮದ ಉತ್ಪನ್ನಗಳ ವಿನ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ಇದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕೆಎಸ್ಎಸ್ಐಡಿಸಿ ಒದಗಿಸಿದೆ.

ಬಂಡವಾಳ ಹೂಡಿಕೆದಾರರ ಉತ್ತೇಜನ ಯೋಜನೆ:

ನಿಗಮವು ವಿವಿದೆಡೆ ೨೭ ಕಚ್ಚಾ ವಸ್ತುಗಳ ಶೇಖರಣ ಘಟಕವನ್ನು ರಾಜ್ಯದ ಉದ್ದಗಲಕ್ಕೂ ಸ್ಥಾಪಿಸಿ, ಸಣ್ಣ ಕೈಗಾರಿಕೋಧ್ಯಮದ ಬೇಡಿಕೆಗಳನ್ನು ಪೂರೈಸುತ್ತಿದೆ. ಕೈಗಾರಿಕೋಧ್ಯಮದ ಅಗತ್ಯ ವಸ್ತುಗಳಾದ ಕಬ್ಬಿಣ, ಲೋಹ, ಪ್ಯಾರಾಫಿನ್ ವ್ಯಾಕ್ಸ್, ಕಲ್ಲಿದ್ದಲು ಮತ್ತು ಅರೆಗಾವು ಕಲ್ಲಿದ್ದಲು, ಉತ್ಪನ್ನಗಳನ್ನು ನಿಗಮವು ನಿರ್ವಹಿಸುತ್ತಿದೆ. ಎಸ್.ಎ.ಐ.ಎಲ್., ಟಿಸ್ಕೊ. ಐಐಎಸ್ಕೊ, ವಿಎಸ್ಪಿ, ಐಒಸಿ ಮತ್ತು ಕೋಲ್ ಇಂಡಿಯ ದಿಂದ ಪಾಡೆಯಲಾಗುತ್ತದೆ.

ನಿಗಮವು ಸರ್ಕಾರಿ ಶಾಖೆಗಳಿಗೆ ಕಚ್ಚಾವಸ್ತುಗಳನ್ನು ಹಂಚಿಕೆ ಮಾಡುತ್ತಿದೆ. ಕಂಪನಿಯು ಒಂದು ಗೊಡೌನ್ ಕೇಂದ್ರ ಸ್ಥಾಪಿಸಿದ್ದು, ಇದಕ್ಕೆ ರೈಲು ಸೈಡಿಂಗ್ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನ ಚೆನ್ನಸಂದ್ರದಲ್ಲಿ ಸುಮಾರು ೧೦೦ ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಚೆನ್ನಸಂದ್ರ ಉಗ್ರಾಣದಲ್ಲ್ಲಿ ಒಂದು ಲಕ್ಷ ಮೀಟರ್ ಕಬ್ಬಿಣವನ್ನು ಇರಿಸಬಹುದಾಗಿದೆ.

ಕಚ್ಚಾವಸ್ತುಗಳನ್ನು ಪಡೆಯುವ ಮತ್ತು ಹಂಚಿಕೆ:

ನಿಗಮವು ಹಣಹೂಡಿಕೆದಾರರ ಅಭಿವೃದ್ಧಿಗೊಳಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಸಹಾಯಕ್ಕೆ, ಟೆಕ್ಸಾಕ್ ಮತ್ತು ಇನ್ನಿತರ ವಾಣಿಜ್ಯ ಬ್ಯಾಂಕ್ ಗಳು ತುಂಬಿದ ಪ್ರತಿಭೆಗಳೊಂದಿಗೆ ಹಾಗು ಹೂಡಿಕೆಯ ಆಯಾಮಗಳನ್ನು ಹೆಚ್ಚಿಸುವ ದಿಕ್ಕಿನಲ್ಲಿ ವಿದ್ಯಾವಂತರನ್ನಾಗಿಸಲು, ಯುವಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ

ಕೆ‌ಎಸ್‌ಎಸ್‌ಐಡಿಸಿ ಗುರಿ:

ನಿಗಮದ ಮುಖ್ಯ ಗುರಿ ಸಣ್ಣ ಕೈಗಾರಿಕೋಧ್ಯಮದವರನ್ನು ಅಭಿವೃದ್ಧಿಗೊಳಿಸಿ. ಹಿಂದುಳಿದ ಪ್ರದೇಶಗಳಲ್ಲ್ಲಿ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯಗಳ ಸದುಪಯೋಗ ಪಡಿಸಿಕೊಳ್ಳುವುದಾಗಿದೆ. ಉತ್ಪನ್ನಗಳ ಗುಣಮಟ್ಟ, ಸಮಯ ಪರಿಪಾಲನೆ ಮತ್ತು ಬಂಡವಾಳ ಹೂಡಿಕೆದಾರರ ಕಷ್ಟಗಳನ್ನು ಅರಿತು ಕೆಲಸ ನಿರ್ವಹಿಸುವುದರಲ್ಲಿ ಕೆಎಸ್ಎಸ್ಐಡಿಸಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಕೈಗಾರಿಕೋಧ್ಯಮವಾಗಿ ಬೆಳವಣಿಗೆ ಹೊಂದುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.