ಮಾರ್ಗದರ್ಶಿ

ಕೆ.ಎಸ್.ಎಸ್.ಐ.ಡಿ.ಸಿ.ಯ ಒಂದು ಭಾಗವಾಗುವುದರೊಂದಿಗೆ ಪಡೆಯಬಹುದಾದ ಲಾಭ

ಕೆ.ಎಸ್.ಎಸ್.ಐ.ಡಿಸಿಯು ಎಲ್ಲಾ ವಾಸ್ತವಿಕ ಉದ್ದೇಶಗಳಿಗಾಗಿ ಕೇಂದ್ರಿಕೃತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಸ್ತಿರಾಸ್ಥಿಯನ್ನು ಖಾಸಗಿ ಸ್ತಿರಾಸ್ಥಿಗಳಿಂದ ಬಿನ್ನವಾಗುವಂತೆ ಗುರುತಿಸಲಾಗಿರುತ್ತೆ

ಇದರ ಭಾಗವಾಗುವುದರೊಂದಿಗೆ ಪಡೆಯುವ ಲಾಭಗಳು:

  1. ಕೆ.ಎಸ್.ಎಸ್.ಐ.ಡಿ.ಸಿ ಜಾಗವು, ಕೇವಲ ಕೈಗಾರಿಕ ಉದ್ದೇಶಗಳಿಗೆ ಮಾತ್ರ ಮೀಸಲಾಗಿರುತ್ತದೆ. ಹೀಗಾಗಿ, ಸರ್ಕಾರದಿಂದ ಸಮ್ಮತಿ ಪತ್ರಕ್ಕಾಗಿ ಕಾಯುವ ಸಮಯ ಉಳಿತಾಯ. ಸಂಸ್ಥೆಯು ಆ ಪ್ರದೇಶಕ್ಕಾಗಿ ಸೂಕ್ತ ವಾತಾವರಣದಲ್ಲಿ, ನೀರು, ವಿದ್ಯುತ್, ಸಂಪರ್ಕ ಹಾಗು ಕೈಗಾರಿಕ ಹೊರಹೊಮ್ಮುವ ಕಸವನ್ನು ಕೂಡಿಡುವುದಕ್ಕೆ ವ್ಯವಸ್ಥೆಯೊಂದಿಗೆ, ಒಂದು ಸುಸಜ್ಜಿತ ಪಕ್ವಗೊಳಿಸಿದ ಹಾಗು ರಚನಾಕ್ರಮದನುಸಾರವಾಗಿ ವೃದ್ಧಿಸಲಾಗಿರುತ್ತೆ.
  2. ಕೆ.ಎಸ್.ಎಸ್.ಐ.ಡಿ.ಸಿ ಸ್ಥಿರಾಸ್ತಿಯಲ್ಲಿ ಅಗತ್ಯವಾಗುವ ತರಬೇತಿ ಕೇಂದ್ರ, ಚಿಕಿತ್ಸಾಲಯ, ಪೊಲೀಸ್ ಚೌಕಿ, ಸಾಮುಹಿಕ ಉದ್ಯಾನವನ, ಬ್ಯಾಂಕ್ಗಳು, ಕ್ಯಾಂಟಿನ್ ಮುಂತಾದವುಗಳನ್ನು ಒದಗಿಸಲಾಗುತ್ತದೆ.
  3. ಎಲ್ಲಾ ಕಟ್ಟಡಗಳು ಅಥವ ಜಾಗಗಳು ಒತ್ತುವರಿಯಿಂದ ಮುಕ್ತವಾಗಿದೆ ಹಾಗು ಈ ಜಾಗಗಳನ್ನು ಮುಂದೆ ಮಾರಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ.
  4. ಬಂಡವಾಳ ಹೂಡಿಕೆದಾರರು ಭೂಮಿಯ ಸ್ವಾಧೀನ ಪತ್ರ ಪಡೆದು ಅದಕ್ಕೆ ಅಗತ್ಯ ಶುಲ್ಕ ನೀಡಿದರೆ, ಅಲ್ಲಿ ಕೈಗಾರಿಕೋಧ್ಯಮ ಪ್ರಾರಂಭಿಸಲು ಅನುವು ಮಾಡಿಕೊಡಲಾಗುತ್ತದೆ.
  5. ಕೆ.ಎಸ್.ಎಸ್.ಐ.ಡಿ.ಸಿ ಶೀಘ್ರವಾಗಿ ಕೈಗಾರಿಕೋಧ್ಯಮ ಪ್ರಾರಂಭಿಸಲು ವ್ಯವಸ್ಥಿತ ಮಳಿಗೆಗಳನ್ನು ನೀಡಲಾಗುತ್ತೆ ಹಾಗು ಸಾಮಾಗ್ರಿಗಳನ್ನು ಸಂಗ್ರಹಿಸಲು ಶೇಖರಣ ಘಟಕಗಳು ಸಹ ಇರುತ್ತದೆ.
  6. ಕೆ.ಎಸ್.ಎಸ್.ಐ.ಡಿ.ಸಿ ಸರ್ಕಾರದ ಒಂದು ಭಾಗವಾಗಿರುವುದರಿಂದ, ಅದರ ಕಟ್ಟಡ/ಭೂಮಿ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಯಿಂದ ಇರುತ್ತದೆ. ಹಣಕಾಸು ನೆರವು ಒದಗಿಸುವ ಸಂಸ್ಥೆಗಳಿಂದ ಸುಲಭವಾಗಿ ಸಾಲ ಒದಗಿಸುತ್ತದೆ.
  7. ಕೆ.ಎಸ್.ಎಸ್.ಐ.ಡಿ.ಸಿಯು ಕಚ್ಚಾ ವಸ್ತುಗಳು, ವ್ಯಾಪಾರ ತಂತ್ರಜ್ಞಾನ, ಸಂಪರ್ಕ ಒದಗಿಸುವ ವಿಷಯಗಳಲ್ಲಿ ಸಮೂಹ ಲಾಭಗಳನ್ನೊಳಗೊಂಡ ಅನನ್ಯ ಸದವಾಕಾಶವನ್ನು ಒದಗಿಸುತ್ತದೆ.
  8. ಕೆ.ಎಸ್.ಎಸ್.ಐ.ಡಿ.ಸಿ ತೆಗೆದುಕೊಳ್ಳುವ ಯಾವುದಾದರು ಮೇಲ್ದರ್ಜೆಗೇರಿಸುವ ಕಾರ್ಯಕ್ರಮಗಳಿಂದ ಆ ಪ್ರದೇಶದ ಎಲ್ಲಾ ಸಣ್ಣ ಕೈಗಾರಿಕೋಧ್ಯಮಗಳೂ ಲಾಭ ಪಡೆಯುತ್ತದೆ.
  9. ಕೆ.ಎಸ್.ಎಸ್.ಐ.ಡಿ.ಸಿಯು ಭೂಮಿ ಪಡೆಯುವ ಹಾಗು ನೇಮಿಸುವ ವಿಷಯದಲ್ಲಿ, ಸಣ್ಣ ಕೈಗಾರಿಕೋಧ್ಯವ್ಯಮಗಳಿಗೆ ವಿಶೇಷ ಸೇವೆ ಒದಗಿಸಲಾಗುವುದು.
  10. ಕೆ.ಎಸ್.ಎಸ್.ಐ.ಡಿ.ಸಿಯು ಎಸ್.ಸಿ./ಎಸ್.ಟಿ./ಎಸ್.ಇ.ಡಿ.ಸಿ. ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ನಂತರದಲ್ಲಿ ಹಿಂದುಳಿದ ಭಾಗಗಳ ನಿರ್ಗತಿಕ ಎಸ್.ಸಿ. ಮತ್ತು ಎಸ್.ಟಿ ಸಮೂಹಗಳಿಗೆ ಪ್ರೋತ್ಸಾಹ ಧನ ಹಾಗು ಕಡಿತಗೊಳಿಸಿದ ಇ.ಎಮ್.ಡಿ./ಅರ್ಜಿ ಶುಲ್ಕ/ ಪರಿಶೋಧನ ಶುಲ್ಕ ಕಟ್ಟುವ ವ್ಯವಸ್ಥೆ ಮಾಡಲಾಗುವುದು.
  11. ಕೆ.ಎಸ್.ಎಸ್.ಐ.ಡಿ.ಸಿಯ ವಿಭಾಗೀಯ ಕಛೇರಿಗಳಲ್ಲಿ ಕಚ್ಚಾವಸ್ತುಗಳ ಶೇಖರಣ ಘಟಕ ಸ್ಥಾಪಿಸಿ, ಸಣ್ಣ ಕೈಗಾರಿಕೋಧ್ಯಮಗಳಿಗೆ ನೀಡಲಾಗುವುದು
  12. ಕೆ.ಎಸ್.ಎಸ್.ಐ.ಡಿ.ಸಿ ಯ ಸ್ಥಿರಾಸ್ತಿಯು, ಐ.ಎಸ್.ಐ ಮಾನ್ಯತೆ ಪಡೆದ ಘಟಕಗಳನ್ನು ಸ್ಥಾಪಿಸುವ ಮೂಲಕ, ಗುಣಾತ್ಕಕ ಉತ್ಪನ್ನಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತದೆ.
  13. ಕೆ.ಎಸ್.ಎಸ್.ಐ.ಡಿ.ಸಿ ಯು ಸೇವಾ ಶುಲ್ಕವನ್ನು ವಾರ್ಷಿಕವಾಗಿ ಪಡೆದುಕೊಳ್ಳುತ್ತದೆ. ಕೆ.ಎಸ್.ಎಸ್.ಐ.ಡಿ.ಸಿ ಸ್ಥಿರಾಸ್ತಿಯಲ್ಲಿನ ಸಣ್ಣ ಕೈಗಾರಿಕೋಧ್ಯಮಗಳಿಗೆ, ಯಂತ್ರೋಪಕರಣ ಹಾಗು ಕಚ್ಛಾ ವಸ್ತುಗಳನ್ನು ಕೊಳ್ಳಲು ವಿವಿಧ ಹಣಕಾಸು ಸಂಸ್ಥೆ ಹಾಗು ರಾಷ್ಟ್ರೀಕೃತ ಬ್ಯಾಂಕುಗಳು ಸಲಭವಾಗಿ ಬಂಡವಾಳ ಒದಗಿಸುತ್ತದೆ.